"ಮುರಳಿಯಾಗಿರುವೆ"
ಮನದ ಮುರಳಿಯಾಗಿ
ನೀನಿರಲೇನು ಸುಖ
ಇಳಿದು ಬಾರದೆ ಮಹಡಿ
ನೀನು ಸಖೀ
ಅಳಲು ಅಲ್ಲವಿದು, ತುಡಿತ
ಮನದಿ ಆಸೆ ತುದಿ
ನೀನು ಬರಲು
ಏರಲಿರುವೆ ಉತ್ತುಂಗದೀ .
ಸುಶ್ರಾವ್ಯ ಕಂಠವಿದು
ನಿನಗಾಗಿಯೇ ಅರಳಿದೆ .
ನೀನು ಬರದೆ
ಮರಳಿ ಕಮರಲಿದೇ .
ಆಕಾಶ ನೋಡು ಅಲ್ಲಿ
ಹಾರು ಹಕ್ಕಿದೂಗಿದೇ
ನೀನು ಸವಿಯ
ಸವಿದರೆ ಸರಿದೂಗದೇ .
ದುಂಭಿ ಹಾಡು
ಮುರುಳಿ ಸ್ವರವ ಹಾಡಿ ,
ತುಡಿತಗೊಂದು
ಹುರಿದುಂಬಿದೇ .
ಅಸಲೀ ಪ್ರೀತಿ ನಿನಗೇ
ಕಾದು ಉಗಳು ಮುಗಿದು
ನಿನ್ನ ಅಸರನೇ
ಕಾಯುತಿದೇ
ನೀನು ಹರಿದು
ಸ್ವರವಾಗಿ ಮುರುಳಿಯ
ಹಾಡಾಗಿ ಬಂದರೇ
ಹೊಮ್ಮಲಿದೇ ...