ಖಾನ್‌ಗಳ ಮೇಲೆ ಮಾತ್ರ ಪ್ರೀತಿ ಮುಸ್ಲಿಂ ನಟಿಯರ ಮೇಲೆ ಮೋಹ ಎಂದು ಕಂಗನಾ ರನೌತ್ ಅವರು ಮುಚ್ಚಿದ್ದ ತಮ್ಮ ಟ್ವಿಟರ್ ಮತ್ತೆ ತೆರೆದ ಮೇಲೆ ಟ್ವೀಟ್ ಮಾಡಿದ್ದಾರೆ.

ನಟಿ ರೂಪದರ್ಶಿ ಊರ್ಪಿ ಜಾವೇದ್ ಅದಕ್ಕೆ ನಟನಟಿಯರು ಅಷ್ಟೆ, ಮುಸ್ಲಿಂ ಹಿಂದೂ ಎಂದೆಲ್ಲ ಇಲ್ಲ ಎಂದಿದ್ದಾರೆ. ಅದಕ್ಕೆ ಕಂಗನಾರು ಪ್ರಧಾನಿಯವರೆ ನಾವು ಸಮಾನ ನಾಗರಿಕ ಸಂಹಿತೆ ತರಲು ಇದು ಸಕಾಲ. ನಮ್ಮ ಗೆಳತಿ ಊರ್ಪಿಗೆ ಎಲ್ಲರೂ ಒಂದೇ ಎಂದು ಅರ್ಜಿ ಸಲ್ಲಿಸಿದ್ದಾರೆ.

ಪಠಾಣ್ ಚಿತ್ರ ನೋಡಿದ ಕಂಗನಾ ಹೇಳಿದ್ದೇನು ಗೊತ್ತೆ? ಇದು ಭಾರತೀಯ ಪಠಾಣ್, ಅಫಘಾನಿಸ್ತಾನದಲ್ಲಿ ನರಕ ಕಾಣಿಸುತ್ತಿದೆ ಎಂದಿದ್ದರು. 2021ರ ಮೇ ತಿಂಗಳಲ್ಲಿ ಪಡುವಣ ಬಂಗಾಳದ ಹಿಂಸಾಚಾರದ ಬಗೆಗೆ ಪ್ರಚೋದಕ ಟ್ವೀಟ್ ಮಾಡಿದ್ದರಿಂದ ಕಂಗನಾರ ಟ್ವಿಟರ್ ಖಾತೆ ಬಂದ್ ಆಗಿತ್ತು.