ಮಂಗಳೂರು: ಮಂಗಳೂರಿನ ಜರ್ನಿ ಥೇಟರ್ ಗ್ರೂಪ್(ರಿ.) ಇದರ ಮಹಾಸಭೆಯು ಇತ್ತೀಚೆಗೆ ಶಕ್ತಿನಗರದ ಕರಾಡ ಸಮಾಜಭವನದಲ್ಲಿ ನಡೆದಿದ್ದು ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯಾಯಿತು.

ಅಧ್ಯಕ್ಷರಾಗಿ ವಿದ್ದು ಉಚ್ಚಿಲ್, ಉಪಾಧ್ಯಕ್ಷರಾಗಿ ರೋಹನ್ ಎಸ್. ಉಚ್ಚಿಲ್, ಕಾರ್ಯದರ್ಶಿಯಾಗಿ ಸುನಿಲ್ ಪಲ್ಲಮಜಲು, ಸಹ ಕಾರ್ಯದರ್ಶಿಯಾಗಿ ಚಿನ್ಮಯಿ ವಿ. ಭಟ್, ಖಜಾಂಚಿಯಾಗಿ ಶಶಾಂಕ್ ಐತಾಳ್, ನಿರ್ದೇಶಕರಾಗಿ ರಾಘವ್ ಸೂರಿ ಮತ್ತು ಮೇಘನಾ ಕುಂದಾಪುರ, ಸಮಿತಿಯ ಸದಸ್ಯನಾಗಿ ಅರ್ಜುನ್ ಆಚಾರ್ಯ ಆಯ್ಕೆಗೊಂಡರು.

ವಿವಿಧ ಕಾರ್ಯಕಾರಿ ಸಮಿತಿಗಳ ಸಂಯೋಜಕರಾಗಿ ರೋಹಿತ್ ಉಪಾಧ್ಯಾಯ, ಕಿರಣ್ ಕುಮಾರ್, ರಾಹುಲ್ ಕುಡುಪು, ಗೌತಮ್  ಶೆಟ್ಟಿ, ಸುಧೀಶ್ ಕೂಡ್ಲು ಆಯ್ಕೆಯಾದರು.

ಈ ಸಂದರ್ಭದಲ್ಲಿ ಭವ್ಯಾ ಶೆಟ್ಟಿ ಸ್ವಾಗತಿಸಿದರು. ರೋಹನ್ ಎಸ್. ಉಚ್ಚಿಲ್ ವರದಿ ವಾಚಿಸಿ ಕಾರ್ಯಕ್ರಮ ನಿರ್ವಹಿಸಿದರು. ಸುನಿಲ್ ಪಲ್ಲ ಮಜಲು ವಂದಿಸಿದರು.