ಬೆಳ್ಮಣ್: ಜೇಸಿಐ ಸಂಸ್ಥೆ ನೀಡುವ ಸಾಧನಾ ಶ್ರೀ ಪ್ರಶಸ್ತಿಯನ್ನು ಈ ವರ್ಷ ಜೆಸಿಐ ಬೆಳ್ಮಣ್ ನ ಕಾರ್ಯದರ್ಶಿ ಜೆ ಸಿ ಸತೀಶ್ ಪೂಜಾರಿ ಅಬ್ಬನಡ್ಕ ಪಡೆದುಕೊಂಡಿದ್ದಾರೆ.

ಕುಂದಾಪುರ ಕೋಟೇಶ್ವರದ ಕೃಷ್ಣ ಸಹನಾ ಕನ್ವೆನ್ಷನ್ ಸಭಾಂಗಣದಲ್ಲಿ ನಡೆದ ಜೇಸಿ ವಲಯ ಹದಿನೈದರ ವಲಯ ವ್ಯವಹಾರ ಸಮ್ಮೇಳನದಲ್ಲಿ ವಲಯಾಧ್ಯಕ್ಷೆ Jc PPP ಸೌಜನ್ಯಾ ಹೆಗ್ಡೆ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ವ್ಯವಹಾರ ವಿಭಾಗದ ಚೇರ್ಮನ್ Jc ಸಮದ್ ಖಾನ್, ಜೆಸಿಐ ಬೆಳ್ಮಣ್ ಅಧ್ಯಕ್ಷರಾದ JFM ಕೃಷ್ಣ ಪವಾರ್, ಜೆಸಿ ಚಿನ್ಮಯಿ, ಜೇಸಿ ದೀಕ್ಷಿತ್ ,ಜೆಸಿ     ಲಿತಿಶಿಯಾ, ಜೆಸಿ ಅನ್ನಪೂರ್ಣ ಉಪಸ್ಥಿತರಿದ್ದರು