ಫೋರ್ಡ್ ಮೋಟಾರ್ ಕಂಪೆನಿಯು ಭಾರತದ ಚೆನ್ನೈ ಮತ್ತು ಗುಜರಾತಿನ ಸಾನಂದ್‌ನಲ್ಲಿರುವ ತನ್ನ ವಾಹನ ತಯಾರಿಕಾ ಘಟಕಗಳನ್ನು ಮುಚ್ಚುವ ಪ್ರಕಟಣೆ ಹೊರಡಿಸಿದೆ. ಇಲ್ಲಿನ ಘಟಕಗಳು 250 ಕೋಟಿ ಡಾಲರ್ ನಷ್ಟ ಅನುಭವಿಸಿವೆ.
ಇದಕ್ಕೆ ಮೊದಲು ಅಮೆರಿಕದ ಜನರಲ್ ಮೋಟಾರು ಕಂಪೆನಿಯು ಭಾರತದಲ್ಲಿ ಕಂಪೆನಿ ಮುಚ್ಚಿತ್ತು. ಫೋರ್ಡ್‌ನ 4,000 ನೌಕರರು ಈಗ ಅತಂತ್ರರಾಗಿದ್ದಾರೆ.