ಇದು ನಮ್ಮ ಪ್ರತಿಭಟನೆಯ ಕಾಲ, ಅಧಿಕೃತ ಚುನಾವಣಾ ದಿನಾಂಕ ಪ್ರಕಟವಾಗುವುದಕ್ಕೆ ಮೊದಲು ಪ್ರಚಾರ ನಡೆಸಬೇಡಿ ಎಂದು ಪಂಜಾಬಿನ 32 ರೈತ ಸಂಘಟನೆಗಳು ಸಭೆ ನಡೆಸಿ ರಾಜಕೀಯ ಪಕ್ಷಗಳನ್ನು ಒತ್ತಾಯಿಸಿವೆ.

ನಮ್ಮ ಹೋರಾಟಕ್ಕೆ ಈ ಪ್ರಚಾರ ತಡೆಯಾಗಿದೆ ಎಂದು ರೈತ ನಾಯಕ ಬಲ್ಬೀರ್ ಸಿಂಗ್ ರಾಜೇವಾಲ್ ತಿಳಿಸಿದರು. ಕಾಂಗ್ರೆಸ್ ನಾಯಕರು ರೈತ ಮುಖಂಡರನ್ನು ಕಂಡು ಮಾತನಾಡಿ ಸರ್ವ ಸಹಕಾರ ನೀಡುವುದಾಗಿ ಹೇಳಿದರು. ಶಿರೋಮಣಿ ಅಕಾಲಿ ದಳದವರು ಚರ್ಚಿಸಿ ತೀರ್ಮಾನಿಸುವುದಾಗಿ ಹೇಳಿದರು.