ಮಂಗಳೂರಿನ ಉದ್ಯಮಿ ಹಾಗೂ ಕಾಂಗ್ರೆಸ್ ನಾಯಕ ವಿವೇಕ್ ರಾಜ್ ಪೂಜಾರಿ ಅವರ ಮನೆಗೆ ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸಿದರು. ಎರಡು ಕಾರುಗಳಲ್ಲಿ ಬಂದ ಎಂಟು ಮಂದಿ ಅಧಿಕಾರಿಗಳು ಲೆಕ್ಕ ಪತ್ರ ಜಾಲಾಡಿದ್ದಾರೆ.
ನಾನು ಸರಿಯಾಗಿ ತೆರಿಗೆ ಕಟ್ಟಿದ್ದೇನೆ, ಅದರ ಲೆಕ್ಕವನ್ನೂ ಇಟ್ಟಿದ್ದೇನೆ. ಚಿಕ್ಕಮಗಳೂರು ಚುನಾವಣಾ ಉಸ್ತುವಾರಿ ಹಾಕಿರುವುದರಿಂದ ಆದಾಯ ತೆರಿಗೆ ಇಲಾಖೆಯವರು ದಾಳಿ ಮಾಡಿ ತಮ್ಮ ಸಂಶಯ ಸರಿಪಡಿಸಿಕೊಂಡಿದ್ದಾರೆ ಎಂದು ವಿವೇಕ್ ರಾಜ್ ಪೂಜಾರಿ ತಿಳಿಸಿದರು.