ಮಂಗಳೂರು : ದೈವಜ್ಞ ಬ್ರಾಹ್ಮಣ ಸಮಾಜದ ಗುರುಗಳಾದ.ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮೀಜಿಗಳು ಮಂಗಳವಾರ ಜಿಲ್ಲೆಯ ಪುಣ್ಯಕ್ಷೇತ್ರಗಳಾದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಹಾಗೂ ಶ್ರೀ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿದರು.

ಕ್ಷೇತ್ರ ಧರ್ಶನ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸಿದ ಶ್ರೀಗಳು ಮಂಗಳವಾರ ಸಂಜೆ ಮಂಗಳೂರಿನ ರಥಬೀದಿ ಸಮೀಪವಿರುವ ಪಂಚಮಹಾಶಕ್ತಿ ಗಾಯತ್ರಿ ದೇವಿ: ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಆಗಮಿಸಿದರು.  ಸ್ವಾಮೀಜಿಗಳನ್ನು  ವಾದ್ಯಘೋಷಗಳೊಂದಿಗೆ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಬಳಿಕ ಸ್ವಾಮೀಜಿಗಳು ದೇವಸ್ಥಾನದಲ್ಲಿಯೇ ಮೊಕ್ಕಂ ಹೂಡಿದರು.

ಡಿಸೆಂಬರ್. 8ರಂದು ಬುಧವಾರ ಬೆಳಿಗ್ಗೆ ಪಂಚಮಹಾಶಕ್ತಿ ಗಾಯತ್ರಿ ದೇವಿ: ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅಲಂಕಾರ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಭಜನೆಯ ಬಳಿಕ ದೇವಸ್ಥಾನದ ವತಿಯಿಂದ ಸ್ವಾಮೀಜಿಗಳ ಪಾದಪೂಜೆ ನೆರವೇರಿತು. ತದನಂತರ ಆಶೀರ್ವಚನ ನೀಡಿದ ಸ್ವಾಮೀಜಿಗಳು ಭಕ್ತಾಧಿಗಳಿಗೆ ಫಲಮಂತ್ರಾಕ್ಷತೆ ವಿತರಿಸಿದರು.

ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮಾತ್ ಹಾಗೂ ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ದೈವಜ್ನ ಶ್ರೀಗಳಿಂದ ಮಂತ್ರಾಕ್ಷತೆ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭ  ದೇವಸ್ಥಾನ ಮೊಕ್ತೇಸರರಾದ ರಮೇಶ್ ಶೇಟ್, ದೈವಜ್ನ ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ. ಸುಧಕರ್ ಶೆಟ್, ಮಹಿಳಾ ಮಂಡಳಿ ಅಧ್ಯೆಕ್ಷೆ ಪುಷ್ಪ ಕೆ.ಶೇಟ್, ದೈವಜ್ನ ಕೊ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಂ. ಆಶೋಕ್ ಶೇಟ್,  ದೈವಜ್ನ ಚಿನ್ನ ಬೆಳ್ಳಿ ಕೆಲಸಗಾರರ ಗೌರವಾಧ್ಯಕ್ಷ ಅರುಣ್ ಶೇಟ್,  ಅಧ್ಯಕ್ಷ ಶ್ರೀಪಾದ ಶೇಟ್ ಹಾಗೂ ಮತ್ತಿತ್ತರ ಪ್ರಮುಖರು ಉಪಸ್ಥಿತರಿದ್ದರು.

ಸರಕಾರದ ಕೋವೀಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.