ಕೊಲ್ಲಿ ದೇಶದಲ್ಲಿ ಕೆಲಸದಲ್ಲಿ ಇದ್ದು, ಮೂರು ವರುಷಗಳ ಬಳಿಕ ಊರಿಗೆ ಬಂದ ಮಗ ತಾಯಿಯಲ್ಲಿ ಮೀನು ವ್ಯಾಪಾರ ಮಾಡಿ ಅಚ್ಚರಿ ಬೀಳಿಸಿದ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ. ವೀಡಿಯೋ ವೈರಲ್ ಆಗಿದೆ.
ಯಾವುದೇ ಮಾಹಿತಿ ನೀಡದೆ ಊರಿಗೆ ಬಂದಿರುವ ರೋಹಿತ್ ಮುಖಕ್ಕೆ ಮಪ್ಲರ್ ಸುತ್ತಿಕೊಂಡು ಮೀನು ಮಾರುಕಟ್ಟೆಗೆ ಹೋಗಿದ್ದಾನೆ. ಕುಂದಾಪುರ ಬಳಿಯ ಗಂಗೊಳ್ಳಿಯ ಮಾರುಕಟ್ಟೆಯಲ್ಲಿ ತಾಯಿಯ ಬಳಿ ಮೀನು ಖರೀದಿಸಲು ಚೌಕಾಶಿ ಮಾಡಿದ್ದಾನೆ. ಅಷ್ಟರಲ್ಲಿ ಸ್ವರದಲ್ಲಿ ಗುರುತು ಹಿಡಿದ ತಾಯಿ ಸುಮಿತ್ರಾ, ರೋಯಿತ್ನಾ ಅದ್, ಹತ್ ಕಳ್ಳ ಎಂದು ಮೇಲೆದ್ದಿದ್ದಾರೆ. ತಾಯಿ ಮಗ ಆನಂದದ ಕಣ್ಣೀರು ಸುರಿಸಿ ತಬ್ಬಿದ್ದಾರೆ.