ಕಾಬೂಲ್ ವಿಮಾನ ನಿಲ್ದಾಣದ ಬಳಿಯಲ್ಲಿ ನಡೆದ ಆತ್ಮಹತ್ಯೆ ದಾಳಿಗೆ ಪ್ರತಿಯಾಗಿ ಐಸಿಸ್ ಕುರಾಸನ್ ಮೇಲೆ ಗುರಿಯಿಟ್ಟು ನಡೆಸಿದ ಡ್ರೋನ್ ದಾಳಿಯಲ್ಲಿ ನಾಗರಿಕರು ಸಾವಿಗೀಡಾದ ಸಂಬಂಧ ಅಮೆರಿಕ ಸಂಯುಕ್ತ ಸಂಸ್ಥಾನವು ತಪ್ಪೊಪ್ಪಿಕೊಂಡಿದೆ.
ಈ ದಾಳಿಯಲ್ಲಿ 7 ಮಕ್ಕಳ ಸಹಿತ 10 ಜನ ನಾಗರಿಕರು ಮರಣ ಹೊಂದಿದ್ದರು. ಅಮೆರಿಕದ ಸೆಂಟ್ರಲ್ ಕಮಾಂಡ್‌ನ ಕಮಾಂಡರ್ ಜನರಲ್ ಫ್ರಾಂಕ್ ಮೆಕೆಂಜಿ ತಪ್ಪು ಒಪ್ಪಿಕೊಂಡರು.