ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮತಿ ಜಪ್ಪಿನಮೊಗರು ಇವರ 17ನೇ ವರ್ಷದ ಜಪ್ಪಿನಮೊಗರು ಶ್ರೀ ಗಣೇಶೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಡಾ| ಎಂ.ಎನ್ ರಾಜೇದ್ರ ಕುಮಾರ್ ಅಧ್ಯಕ್ಷರು ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಮಂಗಳೂರು ಮೂರು ದಿನಗಳವಿ ಜೃಭಣೆಯಿಂದ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳ ಉದ್ಘಾಟಿಸಿ ಮಾತನಾಡಿದ ರಾಜೇಂದ್ರ ಕುಮಾರ್ ಗಣೇಶನ್ನು ಪೂಜಿಸಿದರೆ ಭಕ್ತರ ಸಕಲ ವಿಘ್ನ ನಿವಾರಣೆವಾಗುವುದು ಎಂದರು. ಸಭೆಯ ಅಧ್ಯಕ್ಷತೆಯನ್ನು ಆತ್ಮಶಕ್ತಿ ವಿವಿದ್ದೋದ್ದೇಶ ಬ್ಯಾಂಕ್ (ನಿ) ಇದರ ಅಧ್ಯಕ್ಷ ಚಿತ್ತಂರಂಜನ್ ಬೋಳಾರ್ ವಹಿಸಿದ್ದು, ಮುಖ್ಯ ಅತಿಧಿಗಳಾಗಿ ದ.ಕ. ಜಿಲ್ಲಾ ಮಾಜಿ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ, ಉದ್ಯಮಿಗಳಾದ ಜಯಪ್ರಕಾಶ್ ತುಂಬೆ, ಅನಿಲ್ ಶೆಟ್ಟಿ ಮುನ್ನುತೋಟಗುತ್ತು ಗೌರವಾಧ್ಯಕ್ಷರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗುಣಪಾಲ ಜೈನ್ (ಮಾಜಿ ಯೋಧರು) ಮಮತಾ ರಮೇಶ್ ಶೆಟ್ಟಿ ಗ್ರಂಥಪಾಲಕಿ, ಸುಮನ ಶರಣ್ ನ್ಯಾಯವಾದಿ ಮೊದಲಾದ ಗಣ್ಯರು ಭಾಗವಹಿಸಿದ್ದು, ಸಮಿತಿಯ ಅಧ್ಯಕ್ಷರಾದ ಜೆ. ನಾಗೇಂದ್ರ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿ ಅತಿಧಿಗಳನ್ನು ಸ್ವಾಗತಿಸಿದರು. ಕವಿತಾ ಗಂಗಾಧರ್ ಸನ್ಮಾನ ಪತ್ರ ವಾಚಿಸಿದರು. ಕಾರ್ಯಾಧ್ಯಕ್ಷರಾದ ಸುಧಾಕರ್ ಜೆ. ವಂದಿಸಿದರು. ಡೈಜಿ ವಲ್ಡ್ನ ಚೇತನ್ ಶೆಟ್ಟಿ ಹಾಗೂ ಸುಭಾಷ್ ವಿ. ಅಡಪ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ವಿವಿಧ ದಿನಗಳಲ್ಲಿ ಕಂಬಳಕ್ಷೇತ್ರದ ಸಾಧಕರಾದ ಕೋಣಗಳ ಮಾಲಕ ತ್ರಿಶಾಲ್ ಪೂಜಾರಿ ಬೋಳಾರ ಓಟಗಾರ ವಂದಿತ್ ಶೆಟ್ಟಿ ಶಿಕ್ಷಕಿಯರಾದ ಸರೋಜ ಕೆ. ಪಾಲೆಮಾರ್, ಸರೋಳ್ಯಗುತ್ತು ಉಮಾವತಿ ಶೆಟ್ಟಿ ತಾರ್ದೋಲ್ಯ ಹಾಗೂ ಪೋಲಿಸ್ ಸಹಾಯಕ ಉಪನಿರೀಕ್ಷರಾದ ಸಂತೋಷ್ ಪಡೀಲ್ ರವರನ್ನು ಸನ್ಮಾನಿಸಲಾಯಿತು. ವಿವಿಧ ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುನೀತಾ ಉಳ್ಳಾಲ್ರವರ ಶಾರದಾ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಶಾರದ ಆರ್ಟ್ಸ್ ಕಲಾವಿದರು, ಮಂಜೇಶ್ವರ ಇವರ ಮಾಯಕದ ಮಾಯ್ಕರೆ ಪಂಜುರ್ಲಿ ಎಂಬ ನಾಟಕ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿದ್ಯ ಕಾರ್ಯಕ್ರಮ, ಜಯಕರ ಪಂಡಿತ್ ರವರ ನಿರ್ದೇಶನದಲ್ಲಿ ನಾಗತಂಬಿಲ ಎಂಬ ಯಕ್ಷಗಾನ, ಲಕ್ಷೀಶ್ ಸುವರ್ಣರವರ ಸುವರ್ಣ ಆರ್ಕೆಸ್ಟ್ರಾದ ಕಲಾವಿದರಿಂದ ಸಂಗೀತ ರಸಮಂಜರಿ, ಜಗದೀಶ್ ಆಚಾರ್ಯ ಪುತ್ತೂರುರವರ ಬಳಗದವರಿಂದ ಭಕ್ತಿಗೀತೆಗಳು ಗಾನ ವೈಭವ ಕಾರ್ಯಕ್ರಮ, ಆತ್ಮ ಕೆ. ಇವರ ಶಿಷ್ಯೆ ವೃಂದದಿಂದ ಭರತನಾಟ್ಯ ಹಾಗೂ ಜಾನಪದ ನೃತ್ಯ, ಅಶ್ವಿನಿ ನಿಲೇಶ್ರವರ ಶಿಷ್ಯೆಯರಿಂದ ಭಕ್ತಿ ಗಾನಸುಧೆ ಕಾರ್ಯಕ್ರಮ ಹಾಗೂ ವಿವಿಧ ಭಜನಾ ಸಮಿತಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಮಾರೋಪ ಸಮಾರಂಭದ ಬಳಿಕ ಭವ್ಯವಾದ ಶೋಭಯಾತ್ರೆ ನಡೆದು ನೇತ್ರಾವತಿ ತೀರದಲ್ಲಿ ಗಣೇಶ ದೇವರ ವಿಗ್ರಹವನ್ನು ಜಲಾಧಿವಾಸ ನಡೆಯಿತು.