ಮಂಗಳೂರು: ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸೇವಾದಳ ಮತ್ತು ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸೇವಾದಳ ವತಿಯಿಂದ ಇಂದು ತಾ 24.7.2022ರಂದು ನಗರದ ಹೊಯ್ಗೆಬಜಾರ್ ವಾರ್ಡ್ ಹಾಗೂ 26ನೇ ದೇರೆಬೈಲ್ ವಾರ್ಡಿನಲ್ಲಿ ಸ್ವಾತಂತ್ರ್ಯ 75ನೇ ಅಂಬ್ರತೋತ್ಸವ ಅಂಗವಾಗಿ "ಸೇವೆಗಾಗಿ ಸಂಕಲ್ಪ" ಸಲುವಾಗಿ ಸೇವಾದಳ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮಲೇರಿಯಾ, ಡೆಂಗ್ಯೂ ರೋಗವನ್ನು ನಿಯಂತ್ರಿಸುವ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮ ನಡೆಸಲಾಯಿತು. ನಗರದ ಕೆಲವು ಕಡೆಗಳಲ್ಲಿ ಮಲೇರಿಯಾ ಮತ್ತು ಡೆಂಗ್ಯೂ ರೋಗ ಬಂದಿದ್ದು, ಇದನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಜನರಿಗೆ ಅರಿವು ಮೂಡಿಸುವ ಸಲುವಾಗಿ ಈ ಅಭಿಯಾನವನ್ನು ಕಾಂಗ್ರೆಸ್ ಸೇವಾದಳ ವತಿಯಿಂದ ಪ್ರಾರಂಭಿಸಲಾಗಿದೆ. ಮುಂದಿನ 4 ಭಾನುವಾರ ದಿವಸಗಳಲ್ಲಿ ಇನ್ನೂ ಹಲವು ಕಡೆಗಳಲ್ಲಿ ಈ ಕಾರ್ಯಕ್ರಮಗಳು ನಡೆಯಲಿದೆ.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಸಲಿಂ, ಪ್ರಕಾಶ್ ಸಾಲ್ಯಾನ್, ಸೇವಾದಳ ಕ್ಷೇತ್ರ ಅಧ್ಯಕ್ಷ ಉದಯ್ ಕುಂದರ್, ಬ್ಲಾಕ್ ಅಧ್ಯಕ್ಷ ಹುಸೈನ್ ಪಾದೇಕಲ್, ಪಕ್ಷದ ಪ್ರಮುಖರಾದ ಟಿ. ಕೆ. ಸುಧೀರ್, ಶಾಂತಲಾ ಗಟ್ಟಿ, ಶರತ್ ಕುಮಾರ್, ಚೇತನ್ ಕುಮಾರ್, ಟಿ. ಸಿ. ಗಣೇಶ್, ಜ್ಞಾನೇಶ್ ಕುಮಾರ್, ರೂಪ ಚೇತನ್, ಶರ್ಮಿಳಾ ಶರತ್, ಮಂಜುಳಾ ನಾಯಕ್,ಮಾಜಿ ಕಾರ್ಪೊರೇಟರ್ ಗಳಾದ ಪದ್ಮನಾಭ ಅಮೀನ್, ಕವಿತಾ ವಾಸು ಮತ್ತು ನಿರಂಜನ್, ಹೈದರ್ ಆಲಿ, ತುಕಾರಾಮ್, ರಕ್ಷಿತ್ ಸಾಲ್ಯಾನ್, ವಿಕ್ಟೋರಿಯಾ, ಸೀತಾರಾಮ್ ಶೆಟ್ಟಿ, ಪ್ರಥ್ವಿ ಸಾಲ್ಯಾನ್, ಲತೇಶ್, ಸೀತಾರಾಮ್ ಪೂಜಾರಿ, ರೋಹಿತ್ ಸುವರ್ಣ,ಮೋಹಿನಿ ಅಮೀನ್, ಸ್ವೀಟಿ, ಕಿಶೋರ್, ರಘು, ಸಮೃದ್ಧಿ, ರಘು, ಚಂದು ಮೊದಲಾದವರು ಉಪಸ್ಥಿತರಿದ್ದರು.