ಮಂಗಳೂರು: ಕರಾವಳಿ ಉತ್ಸವ ವಸ್ತು ಪ್ರದರ್ಶನ ವೇದಿಕೆಯಲ್ಲಿ ಡಿಸೆಂಬರ್ 27 ರಂದು ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ಎಕ್ಸ್ ಪರ್ಟ್ ಕಾಲೇಜು ವತಿಯಿಂದ ಎಕ್ಸ್ ಪರ್ಟ್ ಕಲೋತ್ಸವ ಮತ್ತು 7 ರಿಂದ 9 ಗಂಟೆಯವರೆಗೆ ಪುಶ್ಕಲ ಕುಮಾರ್ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಡಿಸೆಂಬರ್ 28 ರಂದು ಸಂಜೆ 6 ಗಂಟೆಯಿಂದ 7:30 ಗಂಟೆಯವರೆಗೆ ಹರಿದಾಸ್ ಮತ್ತು ತಂಡದಿಂದ ಸ್ಯಾಕ್ಸೋಫೋನ್ ಮತ್ತು 7:30 ರಿಂದ 9:30 ಗಂಟೆಯವರೆಗೆ ನೃತ್ಯ ಸುಧಾ ತಂಡದಿಂದ ನೃತ್ಯಯಾನ ಕಾರ್ಯಕ್ರಮ ನಡೆಯಲಿದೆ.
ಡಿಸೆಂಬರ್ 29 ರಂದು ಸಂಜೆ 6 ಗಂಟೆಯಿಂದ 9 ಗಂಟೆಯ ವರೆಗೆ ತುಳು ಕಾಮಿಡಿ ಡ್ರಾಮಾ ತಂಡದಿಂದ ಆನ್ ಮಗೆ ನಾಟಕ ನಡೆಯಲಿದೆ.
ಕದ್ರಿ ಪಾರ್ಕ್ ವೇದಿಕೆಯಲ್ಲಿ ಡಿಸೆಂಬರ್ 28 ರಂದು ಬೆಳಿಗ್ಗೆ 6 ರಿಂದ 7 ರವರೆಗೆ ದೇಲಂಪಾಡಿ ತಂಡದಿಂದ ಯೋಗ, ಬೆಳಿಗ್ಗೆ 7 ರಿಂದ 9 ಗಂಟೆಯವರೆಗೆ ಸ್ವರಾಲಯ ಸಂಗೀತ ವಿದ್ಯಾಲಯದ ತಂಡದಿಂದ ಭಕ್ತಿಗಾಯನ ಮತ್ತು ಸಂಜೆ 6 ರಿಂದ 7:15 ರ ವರೆಗೆ ಉಸ್ತಾದ್‍ರೈಸ್‍ಖಾನ್ ಮತ್ತು ಉಸ್ತಾದ್ ಹಫೀಝ್‍ಖಾನ್ ಅವರಿಂದ ದಾಸವಾಣಿ, 7:15 ರಿಂದ 8 ರ ವರೆಗೆ ವಿದ್ವಾನ್ ಗಣೇಶ್ ಮತ್ತು ವಿದ್ವಾನ್ ಕುಮಾರೇಶ್ ಅವರಿಂದ ವಯೋಲಿನ್ ಡ್ಯುಯೆಟ್ ಕಾರ್ಯಕ್ರಮ ನಡೆಯಲಿದೆ.