ಐಎಎಸ್‌, ಐಪಿಎಸ್ ಮೊದಲಾದ ನಾಗರಿಕ ಸೇವೆಗಳಲ್ಲಿ 4,000 ಜನ ಆರೆಸ್ಸೆಸ್ ಜನ ತೂರಿಕೊಂಡಿದ್ದು ನಾಗಪುರದ ಹಿಡನ್ ಅಜೆಂಡಾ ಜಾರಿಗೆ ದುಡಿಯುತ್ತಿದ್ದಾರೆ ಎಂದು ಮಾಜೀ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಆರೋಪ ಮಾಡಿದರು.

ಬೆಂಗಳೂರಿನ ಬಿಡದಿಯಲ್ಲಿ ನಡೆದ ಜನತಾ ಪರ್ವ 1.0 ಮತ್ತು ಮಿಶನ್ 123 ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು ಈ ಆರೆಸ್ಸೆಸ್ ನಾಗರಿಕ ಸೇವಾ ಅಧಿಕಾರಿಗಳು ಜನರ ಸೇವೆ ಮಾಡುವುದಿಲ್ಲ. ಆರೆಸ್ಸೆಸ್ ಪ್ರಮುಖರ ಸೇವೆಗೆ ನಿಂತಿದ್ದಾರೆ. ಕಳೆದ ಬಾರಿಯೂ 676 ಜನ ಆರೆಸ್ಸೆಸ್ ಮಂದಿ ನಾಗರಿಕ ಸೇವೆಗೆ ತೀರಿಕೊಂಡರು ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು. ಇದಕ್ಕಾಗಿ ಅವರು ವಿಶೇಷ ಮುಚ್ಚಿದ ಬಾಗಿಲಿನ ತರಬೇತಿ ಕೇಂದ್ರಗಳನ್ನು ಸಹ ಹೊಂದಿರುವುದಾಗಿ ಅವರು ತಿಳಿಸಿದರು.