ವೃತ್ತಿಪರ ಶಿಕ್ಷಣ ಸಾಮಾನ್ಯ ಪ್ರವೇಶ ಪರೀಕ್ಷೆ ಸಿಇಟಿಯು ಆಗಸ್ಟ್ 28, 29ರ ದಿನಗಳಲ್ಲಿ ನಡೆಯಲಿದ್ದು ಅದರ ಪ್ರಕ್ರಿಯೆಗಳಿಗೆ ಕೆಇಎ- ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಚಾಲನೆ ನೀಡಿತು.

ಜೂನ್ 15ರ ಬೆಳಿಗ್ಗೆಯಿಂದ ಜುಲಾಯಿ 10ರ ಸಂಜೆ 5.30ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಜುಲಾಯಿ 13ರ ಒಳಗೆ ನಿಗಧಿತ ಶುಲ್ಕ ಸಲ್ಲಿಸತಕ್ಕದ್ದು. ಜುಲಾಯಿ 14ರಿಂದ 20ರ ಒಳಗೆ ಪ್ರಮಾಣ ಪತ್ರಗಳನ್ನು ಒದಗಿಸಬೇಕು. http://kea.kar.nic.in ಇದರಿಂದ ಅಗತ್ಯದ್ದನ್ನು ಕೆಳಗಿಳಿಸಿಕೊಳ್ಳಬಹುದು.