ಬೆಳುವಾಯಿ:  ದ.ಕ. ಜಿ. ಪಂ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರದ ಆಶ್ರಯದಲ್ಲಿ ಬೆಳುವಾಯಿ ಸಮೃದ್ಧಿ ಸ್ತ್ರೀ ಶಕ್ತಿ ಗೊಂಚಲು ಇದರ ಮೂರು ಗುಂಪುಗಳ ಮಾಹಿತಿ ಸಭೆ ಜೂನ್ 13ರಂದು ಬೆಳುವಾಯಿ ಕರಿಯನಂಗಡಿ ಅಂಗನವಾಡಿಯಲ್ಲಿ ಜರುಗಿತು. ಮುಖ್ಯ ಮಾಹಿತಿದಾರರಾಗಿ ರಾಜ್ಯ ಸಂಪನ್ಮೂಲ ವ್ಯಕ್ತಿ ರಾಯಿ ರಾಜಕುಮಾರ್ ಮೂಡುಬಿದಿರೆ ಆಗಮಿಸಿದ್ದರು.

ಅವರು ತಮ್ಮ ಭಾಷಣದಲ್ಲಿ ಸ್ತ್ರೀ ಶಕ್ತಿ ಗುಂಪುಗಳಿಗೆ ಗ್ರಾಹಕ ಶಿಕ್ಷಣದ ಮಾಹಿತಿಯನ್ನು ನೀಡುತ್ತಾ, ಪ್ರತಿಯೊಂದು ತೊಂದರೆಗಳಾದಾಗ ನಿವಾರಿಸಿಕೊಳ್ಳುವ ಉಪಾಯವನ್ನು ಹಲವಾರು ಉದಾಹರಣೆಗಳ ಮೂಲಕ ಮನದಟ್ಟು ಮಾಡಿಕೊಟ್ಟರು. ಗುಂಪುಗಳ ಸದಸ್ಯರ ಹಲವಾರು ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಪ್ರಾಸಂಗಿಕವಾಗಿ ಪ್ರಸ್ತುತಪಡಿಸಿ ಬರಪೂರ ಮಾಹಿತಿಯನ್ನು ನೀಡಿದರು. ಪ್ರಸಿಲ್ಲಾ ಅವರು ಡೆಂಗ್ಯೂ ಹಾಗೂ ಇತರ ಕಾಯಿಲೆಯ ಕುರಿತು ಜಾಗೃತೆ ವಹಿಸುವಂತೆ ಆರೋಗ್ಯದ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ಸಮೃದ್ಧಿ ಸ್ತ್ರೀಶಕ್ತಿ ಗೊಂಚಲಿನ ಅಧ್ಯಕ್ಷ ಜೋಹಾರ ಬಾನು, ಕಾರ್ಯದರ್ಶಿ ಅಹ್ಮಬಾನು, ಬಾಲ ವಿಕಾಸ ಸಮಿತಿಯ ಅಧ್ಯಕ್ಷ ಸೌಮ್ಯ ರಾಜೇಶ್, ಖಾನಾ ಅಂಗನವಾಡಿ ಕಾರ್ಯಕರ್ತೆ ಜ್ಯೋತಿ ಲಕ್ಷ್ಮಿ, ಕರಿಯನ್ ಅಂಗಡಿ ಅಂಗನವಾಡಿಯ ಶಿಕ್ಷಕಿ ಸುಜಯಕುಮಾರಿ ಹಾಜರಿದ್ದರು.

ಕರಿಯನ್ ಅಂಗಡಿ ಪ್ರದೇಶದ ಸ್ತ್ರೀ ಶಕ್ತಿ ಗುಂಪುಗಳಾದ ನೇತ್ರಾವತಿ, ಆದೀಶ್ವರಿ, ಸುರಭಿಯ ಸದಸ್ಯರುಗಳು, ಕಾನ, ನವಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಬೆಳುವಾಯಿ ವಲಯದ ಆಶಾ ಕಾರ್ಯಕರ್ತೆಯರು ಈ ಸಂದರ್ಭ ಹಾಜರಿದ್ದರು. ಸದಸ್ಯೆ ಪ್ರಮೀಳಾ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಶಬಾನಾ ಅವರು ಧನ್ಯವಾದವಿತ್ತರು.

ಮಕ್ಕಳಿಗೆ ಸ್ವಚ್ಚತೆ ಪರಿಸರದ ಪಾಠ

ಮೂಡುಬಿದರೆ ಸಮೀಪದ ಬೆಳುವಾಯಿ ನಡಿಗುಡ್ಡೆ ಶಾಲೆಯ ಎಲ್ಲ ಮಕ್ಕಳಿಗೆ ಪರಿಸರ ಸ್ವಚ್ಛತೆ ಇತ್ಯಾದಿ ಮಾಹಿತಿಯ ಪಾಠವನ್ನು ಸಂಪನ್ಮೂಲ ವ್ಯಕ್ತಿ ರಾಯಿ ರಾಜಕುಮಾರ್ ಮೂಡುಬಿದಿರೆ ಯವರು ಮಾಡಿದರು. ಉತ್ತಮ ಶಾಲಾ ಪರಿಸರವನ್ನು ಇನ್ನಷ್ಟು ಉತ್ತಮ ಹಾಗೂ ಪರಿಸರ ಯೋಗ್ಯ ಸ್ವಚ್ಛವಾಗಿ ಹೇಗೆ ಇರಿಸಿಕೊಳ್ಳಬಹುದು ಎಂಬ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ಶಾಲಾ ಮುಖಿ ಶಿಕ್ಷಕಿ ಭಾರತಿ ಮಲ್ಯ ಅವರು ಹಾಜರಿದ್ದು ಸ್ವಾಗತಿಸಿ ವಂದಿಸಿದರು. ಶಿಕ್ಷಕಿ ಭವ್ಯ ಕಾರ್ಯಕ್ರಮ ಸಂಯೋಜಿಸಿದ್ದರು.