ಮೂಡುಬಿದಿರೆ, ಮಾ.27: ಮೂಡುಬಿದಿರೆ ಅಮ್ಮನವರ ಬಸದಿ ಅರ್ಚಕರಾಗಿದ್ದು, ಬೃಹತ್ ವಿವಿಧ ಆರಾಧನೆ ಸಂಗ್ರಹ, ಪಂಚ ಕುಲ ದೇವಿ ಶತಾಷ್ಠ ನಾಮವಳಿ, ಕೂಷ್ಮಾಂಡಿನಿ ಚರಿತ್ರೆ ಮೊದಲಾದ ಪುಸ್ತಕ ಸಂಪಾದನೆ ಗೈದ ಹಿರಿಯ ಲೇಖಕ ಧರ್ಮ ರಾಜ ಇಂದ್ರ (94.) ಇಂದು ಸಂಜೆ ತಮ್ಮ ಸ್ವಗೃಹದಲ್ಲಿ ಸ್ವರ್ಗಸ್ಥರಾಗಿದ್ದಾರೆ.
ಜೈನ ಸಾಹಿತ್ಯ ಪದ್ಯ ರಚನೆ ಮಾಡಿ ಪುಸ್ತಕ ಪ್ರಕಟಿಸಿ ಹಂಚುತ್ತಿದ್ದರು. ಹಾರ್ಮೋನಿಯಂ ವಾದಕರಾಗಿ ಶ್ರೀ ಮೂಡುಬಿದಿರೆ ಮಠದಲ್ಲಿ ಜರುಗುತ್ತಿದ್ದ ಸಿಂಹ ಮಾಸದ ಮಂಗಳವಾರ ಪೂಜೆಯಲ್ಲಿ ಅಷ್ಟಾವ ದಾನದಲ್ಲ ತಪ್ಪದೆ ಭಾಗವಹಿಸುತ್ತಿದ್ದರು.
ಜಿನ ವಾಣಿ ಪುರಸ್ಕಾರ ನೀಡಿ ಶ್ರೀ ಕ್ಷೇತ್ರದಿಂದ ಧವಳತ್ರಯ ಜೈನ ಕಾಶಿ ಟ್ರಸ್ಟ್ ವತಿಯಿಂದ ಗೌರವಿಸಲಾಗಿತ್ತು. ಅಗಲಿದ ಆತ್ಮಕ್ಕೆ ಉತ್ತಮ ಸದ್ಗತಿ ಪ್ರಾಪ್ತಿಯಾಗಲಿ ಅವರ ಅಗಲುವಿಕೆಯಿಂದ ಆಗಿರುವ ದುಃಖವನ್ನು ಸಹಿಸುವ ಶಕ್ತಿ ಕುಟುಂಬ ಪರಿವಾರದವರಿಗೆ ಸಿಗಲಿ ಎಂದು ಶ್ರೀ ದಿಗಂಬರ ಜೈನ ಮಠ
ಮೂಡುಬಿದಿರೆ ಇದರ ಜಗದ್ಗುರು ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಶ್ರದ್ಧಾಂಜಲಿ ಅರ್ಪಿಸಿ ಜಿನೇಂದ್ರ ಭಗವಂತರಲ್ಲಿ ಸಮಾಧಿ ಭಕ್ತಿಯ ಮುಖೆನ ಸದ್ಗತಿ ಪ್ರಾರ್ಥಿಸಿದ್ದಾರೆ.