ಮಂಗಳೂರು: ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ನೀತಿ, ಅವೈಜ್ಷಾನಿಕ ರೀತಿಯ ರಸ್ತೆ ನಿರ್ಮಾಣ ಮತ್ತು 120 ಜೀವಗಳನ್ನು ಬಲಿ ತೆಗೆದುಕೊಂಡ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಪ್ರತಿ ಕುಟುಂಬಕ್ಕೆ ಒಂದು ಕೋಟಿ ರೂ ಪರಿಹಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನೀಡಬೇಕು ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡಬೇಕಾದ ಲೋಕಸಭೆಯ ಸಂಸದರಾದ ಬ್ರಿಜೇಷ್ ಚೌಟ ಹಾಗೂ ಕೋಟ ಶ್ರೀನಿವಾಸ್ ಪೂಜಾರಿ ಕೂಡಲೇ ತಮ್ಮ ಹುದ್ದೆಗಳಿಗೆ ರಾಜಿನಾಮೆ ನೀಡಬೇಕು ಎಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ದ.ಕ. ಜಿಲ್ಲೆಯಲ್ಲಿ ಹಾದು ಹೋಗುವ ಎಲ್ಲಾ ರಾಷ್ಟ್ರೀಯ ಹೆದ್ದಾರಿ ರಸ್ತೆಗಳು ಅವೈಜ್ಷಾನಿಕವಾಗಿ ರಚನೆ ಮಾಡಲಾಗಿದ್ದು, ರಸ್ತೆಗಳಲ್ಲಿ ಅಲ್ಲಲ್ಲಿ ನೀರು ತುಂಬುವುದು ಅದು ಅಪಘಾತಗಳಿಗೆ ಅಹ್ವಾನ ನೀಡುವುದು  ಪಂಪ್ವೆಲ್ ಸರ್ಕಲ್ನಲ್ಲಿ ತಿಂಗಳುಗಟ್ಟಲೆ ನೀರು ನಿಂತುಕೋಳ್ಳುವುದು ಸಂಪೂರ್ಣವಾಗಿ ಸರ್ವಿಸ್ ರಸ್ತೆ ನಿರ್ಮಣಮಾಡದೇ ಅವೈಜ್ಞಾನಿಕವಾಗಿ ರೀತಿಯಲ್ಲಿ ರಸ್ತೆ ನಿರ್ಮಾಣ ಮಾಡುವ ಮೂಲಕ ದೊಡ್ಡ ರೀತಿಯಲ್ಲಿ ಬ್ರಷ್ಟಚಾರ ನಡೆದಿದೆ ಈ ಬಗ್ಗೆ ಕೂಡಲೇ ತನಿಖೆಯನ್ನು ಹಮ್ಮಿಕೊಳ್ಳಬೇಕು ಮತ್ತು ಕೇಂದ್ರ ಸರ್ಕಾರದ ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮಾಡಲಾದ ರಸ್ತೆಗಳ ಬಗ್ಗೆ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ ರಸ್ತೆಗಳ ಬಗ್ಗೆ ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್ ಶಾಸಕರು ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷರಾದ  ಐವನ್ ಡಿʼಸೋಜಾರವರ ನೇತೃತ್ವದಲ್ಲಿ ಸಂಘಟಿಸಲಾಗಿದ್ದ ರಾ.ಹೆದ್ದಾರಿ ಅವೈಜ್ಞಾನಿಕ ನಿರ್ಮಾಣದ ವಿರುದ್ದ  ಹೋರಾಟ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 

ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಐವನ್ ಡಿʼಸೋಜಾ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಂತೂರು ಸರ್ಕಲ್ನಲ್ಲಿ ಸೇರಿ ಅಲ್ಲಿಂದ ಅಣಕು ಶವಯಾತ್ರೆಯನ್ನು ಸುಮಾರು ಒಂದು ಕಿ.ಮೀ ಉದ್ದಕ್ಕೆ ರಾಷ್ಟ್ರೀಯ ಹೆದ್ದಾರಿಯವರೆಗೆ ಪಾದಯಾತ್ರೆಯ ಮೂಲಕ ನಡೆದುಕೊಂಡು ಹೋಗಿ ಕಛೇರಿಗೆ ಮುತ್ತಿಗೆ ಹಾಕಿ ಅಲ್ಲಿ ಪ್ರತಿಭಟನೆಯನ್ನು ನಡೆಸಲಾಯ್ತು ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ  ಐವನ್ ಡಿʼಸೋಜಾರವರು ರಾ. ಹೆದ್ಧಾರಿಯನ್ನು ಸುಸ್ಥಿತಿಯಲ್ಲಿ ಇಡುವುದೇ ನನ್ನ ಉದ್ದೇಶ ಎಂದು ಅಧಿಕಾರಕ್ಕೆ ಬಂದ ಸಂಸದ ಬ್ರೀಜೇಷ್ ಚೌಟ ಮತ್ತು ಅವರ ಹಿಂದಿನ ಮಾಜಿ ಸಂಸದರಾದ ನಳೀನ್ ಕುಮಾರ್ ಕಟೀಲ್ ರವರು ಜಿಲ್ಲೆಯ ರಸ್ತೆಗಳನ್ನು ಉತ್ತಮ ರಸ್ತೆಯನ್ನಾಗಿ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಯಾವುದೇ ರಾ.ಹೆ. ಪ್ರಾಧಿಕಾರದಿಂದ ದ.ಕ ಜಿಲ್ಲೆಗೆ ಹಾಗೂ ಉಡುಪಿ ಜಿಲ್ಲೆಗೆ ಹಾಗೂ ಕಾರವಳಿ ಭಾಗಕ್ಕೆ ಸಲ್ಲಬೇಕಾದ ನ್ಯಾಯವನ್ನು ಕೊಡುವಲ್ಲಿ ಬಿಜೆಪಿ ಸಂಸದರು ಸಂಪೂರ್ಣ ವಿಫಲರಾಗಿದ್ದು ಬಿಜೆಪಿ ಸಂಸದರು ರಾಜೀನಾಮೆ ನೀಡಬೇಕೆಂದು ಅಗ್ರಹಿಸಿದರು. 

ಅವೈಜ್ಞಾನಿಕ ರಸ್ತೆ ನಿರ್ಮಣ ಮಾಡಿರುದರಿಂದಲೇ 120 ಜೀವಗಳು ಬಲಿಯಾಗಿವೆ ಈ ಬಗ್ಗೆ ತನಿಖೆ ನಡೆಸಲು ಕೂಡಲೇ ಕೇಂದ್ರ ಸರ್ಕಾರದ ರಾ. ಹೆದ್ದಾರಿ ಪ್ರಾಧಿಕಾರ ಒಂದು ತನಿಖಾ ತಂಡವನ್ನು ಏರ್ಪಡು ಮಾಡಿ ಅವೈಜ್ಞಾನಿಕವಾಗಿ ಮತ್ತು ಕೆಟ್ಟ ರೀತಿಯಲ್ಲಿ ರಸ್ತೆ ನಿರ್ಮಾಣ ಮಾಡಿ ದೊಡ್ಡ ಬ್ರಷ್ಟಾಚಾರ ನಡೆದಿದೆ ಎಂದು ತಿಳಿಸಿದರು. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ರಾ. ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿಯವರಿಗೆ ಒತ್ತಾಯಿಸಿದರು. ಈ ಬಗ್ಗೆ ಕಾಂಟ್ರೆಕ್ಟರ್ಗಳಿಗೆ ನೀಡಲಾದ ಟೆಂಡರ್ನಲ್ಲಿ ಅಳವಡಿಸಲಾದ ಪೂರಕ ಅಂಶಗಳನ್ನು ಕೂಡಲೇ ಪರಿಶೀಲಿಸಬೇಕು ಮತ್ತು ಕಳಪೆ ಕಾಮಗಾರಿ ಕೈಗೊಂಡವರ ಬಗ್ಗೆ ಕ್ರಮ ಕೈಗೊಳ್ಲಬೇಕು  ಸತ್ತವರ ಕುಟುಂಬಗಳಿಗೆ ಕನಿಷ್ಠ ಒಂದು ಕೋಟಿ ಪರಿಹಾರ ಕೂಡಲೇ ಕೊಡಬೇಕು ಕರಾವಳಿ ಭಾಗದಲ್ಲಿ ವಿಪರೀತ ಮಳೆಯಾಗುವ ಕಾರಣ ರಸ್ತೆಯನ್ನು ಕಾಂಕ್ರೀಟೀಕರಣದ ಮೂಲಕವೇ ನಿರ್ಮಾಣ ಮಾಡಬೇಕು ಎಂದು ಐವನ್ ಡಿಸೋಜಾ ಈ ಸಂದರ್ಭದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಎಂಎಲ್.ಸಿ. ಹರೀಶ್ ಕುಮಾರ್ ಮಾಜಿ ಎಂ.ಎಲ್.ಎ. ಜೆ.ಅರ್. ಲೋಬೋ, ಮಿಥುನ್ ರೈ, ಪದ್ಮರಾಜ್, ಎಂ.ಎಸ್ ಮಹಮ್ಮದ್, ಶಶಿಧರ್ ಹೆಗ್ಡೆ, ಪ್ರವೀಣ್ ಅಳ್ವ, ಅನಿಲ್ ಕುಮಾರ್, ಭಾಸ್ಕರ್ ಮೊಯಿಲಿ, ಪ್ರಕಾಶ್ ಸಾಲ್ಯಾನ್, ಸಲೀಂ, ಮನೋರಾಜ್, ಮನೀಷ್ ಬೋಳಾರ್, ಅಪ್ಪಿ, ಅಮೃತ್ ಕದ್ರಿ, ಸಿರಾಜ್ ಬಜ್ಪೆ, ಮಮತಾ ಗಟ್ಟಿ, ,ಇಬ್ರಾಹಿಂ, ಸುಹಾನ್ ಅಳ್ವ , ರಾಜಶೇಖರ್, ಮೀನಾ ಟೆಲ್ಲಿಸ್, ಗೀತಾ ಅತ್ತಾವರ್, ಸತೀಶ್ ಪೆಂಗಲ್, ಚೇತನ್ ಕುಮಾರ್ ಉರ್ವ, ರಮಾನಂದ ಪೂಜಾರಿ, ವಿಕಾಸ್ ಶೆಟ್ಟಿ ,ಗಿರಿಶ್ ಶೆಟ್ಟಿ , ಸುಹೇಲ್ ಕಂದಕ್, ಬಶೀರ್, ನಿಸಾರ್ ಬಜ್ಪೆ, ಅಶ್ರಫ್ ಬೆಂಗ್ರೆ, ಫಯಾಜ್ ಬೆಂಗ್ರೆ ,ನಾಗೇಂದ್ರ  ಕುಮಾರ್, ಕಿರಣ್ ಬುಡ್ಲೆಗುತ್ತು, ಪ್ರೇಮ್ ಬಳ್ಳಾಲ್ಬಾಗ್ , ಯು.ಬಿ ಸಲೀಂ., ಆಲ್ಟೀನ್ ಡಿಕುನ್ಹ, ಟೆಲ್ಲಿಸ್ ಡಿಸಿಲ್ವ, ಜೇಮ್ಸ್ ಪ್ರವೀಣ್, ನೀತಾ ಡಿʼಸೋಜಾ, ಎ.ಸಿ. ವಿನಯರಾಜ್, ಶಂಶುದ್ದೀನ್, ಸಬಿತಾ ಮಿಸ್ಕಿತ್, ಶಾಲೆಟ್ ಪಿಂಟೋ, ಸುರೇಂದ್ರ ಕಾಂಬ್ಳಿ, ಚಂದ್ರಕಲಾ ಜೋಗಿ ಚಂದ್ರಕಲಾ ಡಿ ರಾವ್, ಮೂಂತಾದವರು ಉಪಸ್ತಿತರಿದ್ದರು.