ಬಂಟ್ವಾಳ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ನೋಂ) ಕರ್ನಾಟಕ, ಬಂಟ್ವಾಳ ತಾಲೂಕು ಸಮಿತಿ‌ ನೂತನ ಸಮಿತಿಯ ಜವಾಬ್ದಾರಿ ಘೋಷಣಾ ಸಮಾರಂಭವು ಶ್ರೀರಾಮ  ಪ.ಪೂ. ಕಾಲೇಜು  ಕಲ್ಲಡ್ಕದಲ್ಲಿ ದಿನಾಂಕ ‌ 17 ಜೂ. 2024 ಸೋಮವಾರ, ಏಕಾದಶಿಯಂದು ಮಧ್ಯಾಹ್ನ 1.30 ರಿಂದ‌ ನಡೆಯಲಿದೆ.

ಈ ಸಮಾರಂಭದ ಘನ ಅಧ್ಯಕ್ಷತೆಯನ್ನು - ಡಾ. ಪ್ರಭಾಕರ ಭಟ್, ಕಲ್ಲಡ್ಕ ಅಧ್ಯಕ್ಷರು, ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು. ಇವರು ವಹಿಸಲಿರುವರು. ನೂತನ ಪದಾಧಿಕಾರಿಗಳ  ಜವಾಬ್ದಾರಿ ಘೋಷಣೆಯನ್ನು  ಸುಂದರ ಇಳಂತಿಲ, ಅಭಾಸಾಪ ಮಂಗಳೂರು ವಿಭಾಗ ಸಂಯೋಜಕ ಇವರು ನೆರವೇರಿಸಲಿದ್ದಾರೆ.

ಡಾ. ಸುರೇಶ ನೆಗಳಗುಳಿ ,ನಿಕಟ ಪೂರ್ವ ಅಧ್ಯಕ್ಷರು ಅಭಾಸಾಪ ಬಂಟ್ವಾಳ ತಾಲ್ಲೂಕು ಸಮತಿ ಇವರು ಉಪಸ್ಥಿತರಿರುವರು. 

ಈ ವೇಳೆ  ಗಣರಾಜ ಕುಂಬ್ಳೆ, ಪ್ರಾಚಾರ್ಯರು, ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯ, ರಾಮಕುಂಜ ಇವರಿಂದ ಸಾಹಿತ್ಯ ಮತ್ತು ಪರಿಸರ ಎಂಬ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಲಿರುವುದು.

ಇದಲ್ಲದೆ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ಪರಿಸರ ಕವಿತೆಗಳ ವಾಚನ ಕಾರ್ಯಕ್ರಮದ ಅಧ್ಯಕ್ಷತೆಯನ್ನು - ಸೀತಾಲಕ್ಷ್ಮೀ ವರ್ಮ ವಿಟ್ಲ, (ಶಿಕ್ಷಕಿ,ಕವಯಿತ್ರಿ) ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ಸ್ವರಚಿತ ಪರಿಸರ ಕವಿತಾ ವಾಚನ‌ ಅಧ್ಯಕ್ಷತೆಯನ್ನು - ರಾಜಮಣಿ ರಾಮಕುಂಜ ( ಅಧ್ಯಕ್ಷರು ಅಭಾಸಾಪ ಬಂಟ್ವಾಳ ತಾಲೂಕು ಸಮಿತಿ) ಮತ್ತು  ಹಿರಿ‌ಯ ಮತ್ತು ಕಿರಿಯ ಸಾಹಿತಿಗಳಿಂದ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಜಯಾನಂದ ಪೆರಾಜೆ ( ಹಿರಿಯ ಪತ್ರಕರ್ತರು) ವಹಿಸಲಿದ್ದಾರೆ.

ಈ ದಮಾರಂಭದ ಸಮಗ್ರ ನಿರ್ವಹಣೆಯನ್ನು ಮಧುರಾ  ಕಡ್ಯ ಕಲ್ಲಡ್ಕ (ಅ‌.ಭಾ.ಸಾ.ಪ.ಕಾರ್ಯದರ್ಶಿ) ನಡೆಸಲಿದ್ದಾರೆ ಎಂದು  ಅಧ್ಯಕ್ಷರು, ಮತ್ತು  ಪದಾಧಿಕಾರಿಗಳು, ಬಂಟ್ವಾಳ ತಾಲೂಕು ಸಮಿತಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪರಿಸರ ಕವಿಗೋಷ್ಠಿಯೊಂದನ್ನು ಹಮ್ಮಿ ಕೊಳ್ಳಲಾಗಿದ್ದು ಆಸಕ್ತ ಕವಿಗಳು ಶೀಘ್ರದಲ್ಲಿ ಕಾರ್ಯದರ್ಶಿಯವರ ಈ ಕೆಳಗಿನ ನಂಬರ್ ಗೆ ಸಂಪರ್ಕಿಸಲು ಕೋರಲಾಗಿದೆ.

.

ಮಧುರಾ ಕಡ್ಯ - 94813 85622

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಂಟ್ವಾಳ ಸಮಿತಿ ಪ್ರಕಟಣೆ