ಕಾರ್ಕಳ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ವೇಗವನ್ನು ಹೆಚ್ಚಿಸಿದೆ. ಇಂದು ಕಾರ್ಕಳದಲ್ಲಿ 210 ಬೂತ್ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರು ಏಕಕಾಲದಲ್ಲಿ ಬೂತ್ ಮಟ್ಟದಲ್ಲಿ ಮತಯಾಚನೆಯಲ್ಲಿ ತೊಡಗಿದರು.
ಕಾರ್ಕಳದ ಬಿಜೆಪಿ ಅಭ್ಯರ್ಥಿಯಾದ ವಿ ಸುನಿಲ್ ಕುಮಾರ್ ಬಜೆ ಗೋಳಿಪೇಟೆಯಲ್ಲಿ ನೂರಾರು ಕಾರ್ಯಕರ್ತರ ಒಟ್ಟಿಗೆ ಮನೆಮನೆಗಳಿಗೆ ಹಾಗೂ ಅಂಗಡಿಗಳಲ್ಲಿ ಮತ ಯಾಚಿಸಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿದವರು ರಾಜ್ಯದಲ್ಲಿ ಬಿಜೆಪಿ ಆಡಳಿತ ಬರುವುದು ಗ್ಯಾರಂಟಿ ಕಾರ್ಕಳ ಕ್ಷೇತ್ರದಲ್ಲಿ ಅತ್ಯಧಿಕ ಮತಗಳಿಂದ ಮತಗಳಿಂದ ಬಿಜೆಪಿ ಗೆದ್ದು ಬರಲಿದೆ ಎಂದು ಹೇಳಿದರು.