ಮಂಗಳೂರು, ಫೆ. 26: ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಆದ ನನ್ನಿಂದ ಆರಂಭವಾದ ಕಡತ ವಿಲೇವಾರಿ ಕಾರ್ಯಕ್ರಮ ಅಭಿಯಾನವು ಒಂದು ವಾರದಿಂದ ಬಹಳ ಯಶಸ್ವಿಯಾಗಿ ಮುಂದುವರಿಯುತ್ತಿದೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.

ಜಿಲ್ಲಾ ಮಟ್ಟದ 87 ಅಧಿಕಾರಿಗಳು ಮತ್ತು ತಾಲ್ಲೂಕು  ಮಟ್ಟದ 140 ಅಧಿಕಾರಿಗಳು ಹೆಚ್ಚುವರಿ ಕೆಲಸ ಮಾಡುತ್ತಿದ್ದಾರೆ. 1,700 ಜನರಿಗೆ ಅನುಕೂಲ ಆಗುವ ಕಡತಗಳನ್ನು ವಿಲೇವಾರಿ ಮಾಡಲಾಗಿದೆ. ಜನ ಸ್ಪಂದನೆಯ ಸರಕಾರ ಇದೆ. ಕಡತದ ಮೇಲೆ ಜೀವನ, ಕಡತದಲ್ಲಿ ಜೀವವಿದೆ. ಅವೆಲ್ಲದರ ವಿತರಣೆಯ ಮೂಲಕ ಜನರನ್ನು ತಲುಪುತ್ತಿದ್ದೇವೆ ಎಂದು ಅವರು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಅವರಿಂದ ಆರಂಭವಾದ ಕಡತ ವಿಲೇವಾರಿ ಕಾರ್ಯಕ್ರಮ ಅಭಿಯಾನವು ಒಂದು ವಾರದಿಂದ ಬಹಳ ಯಶಸ್ವಿಯಾಗಿ ಮುಂದುವರಿಯುತ್ತಿದೆ ಎಂದು ಸುನೀಲ್ ಕುಮಾರ್ ಹೇಳಿದರು.

ಈಗಾಗಲೇ 67,000 ಎಂದರೆ 81% ಕಡತ ವಿಲೇವಾರಿ ಆಗಿದೆ. ಜಿಲ್ಲಾ ಮಟ್ಟದ 87 ಅಧಿಕಾರಿಗಳು ಮತ್ತು ತಾಲ್ಲೂಕು  ಮಟ್ಟದ 140 ಅಧಿಕಾರಿಗಳು ಹೆಚ್ಚುವರಿ ಕೆಲಸ ಮಾಡುತ್ತಿದ್ದಾರೆ. 1,700 ಜನರಿಗೆ ತೀರಾ ಅನುಕೂಲ ಆಗುವ ಕಡತಗಳನ್ನು ವಿಲೇವಾರಿ ಮಾಡಲಾಗಿದೆ. ಜನ ಸ್ಪಂದನೆಯ ಸರಕಾರ ಇದೆ. ಕಡತದ ಮೇಲೆ ಜೀವನ, ಕಡತದಲ್ಲಿ ಜೀವವಿದೆ. ಅವೆಲ್ಲದರ ವಿತರಣೆಯ ಮೂಲಕ ಜನರನ್ನು ತಲುಪುತ್ತಿದ್ದೇವೆ ಎಂದು ಸುನೀಲ್ ಕುಮಾರ್ ಹೇಳಿದರು.

ವನವಾಸಿಗಳಿಗೆ ಪ್ರತ್ಯೇಕ ಸೌರ ವಿದ್ಯುತ್ ವ್ಯವಸ್ಥೆ ಮಾಡಲಾಗುವುದು ಎಂದೂ ಸಚಿವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ರಾಜೇಂದ್ರ ಮೊದಲಾದವರು ಉಪಸ್ಥಿತರಿದ್ದರು.