ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಪೋಲೀಸು ಪಡೆಯ ಪ್ರಮುಖ ಅಮಿತಾಬ್ ಅವರನ್ನು ಕೊಲ್ಲುವುದಲ್ಲದೆ ರಾಮ ಮಂದಿರ ಸ್ಫೋಟ ಮಾಡುವುದಾಗಿ ಎಕ್ಸ್ ಪೋಸ್ಟ್ ಮೂಲಕ ಬೆದರಿಕೆ ಹಾಕಿದ್ದ ಇಬ್ಬರನ್ನು ಲಕ್ನೋ ಪೋಲೀಸರು ಬಂಧಿಸಿದ್ದಾರೆ.

ಲಕ್ನೋದ ಗೋಮತಿ ನಗರದ ತಾಹರ್ ಸಿಂಗ್ ಮತ್ತು ಓಂಪ್ರಕಾಶ್ ಮಿಶ್ರಾ ಬಂಧಿತರು. ಇವರನ್ನು ಇದಕ್ಕೆ ಒಪ್ಪಿಸಿ ಮಾಡಿಸಿದ ವ್ಯಕ್ತಿ ದೇವೇಂದ್ರ ತಿವಾರಿ. ಪೋಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಬಂಧಿತರಿಬ್ಬರೂ ಆಲಂ ಅನ್ಸಾರಿ ಖಾನ್ ಮತ್ತು ಜುಬೇರ್ ಖಾನ್ ಎಂಬ ನಕಲಿ ಹೆಸರಿನಲ್ಲಿ ಮಿಂಚಂಚೆ ಕಳುಹಿಸಿದ್ದರು.