ನಟಿ, ಮಾಡೆಲ್, ನಿರ್ಮಾಪಕಿ ಆಯಿಶಾ ಸುಲ್ತಾನಾ ವಿರುದ್ಧ ದೇಶದ್ರೋಹದ ಮೊಕದ್ದಮೆ ಹಾಕಿರುವುದನ್ನು ಖಂಡಿಸಿ ಲಕ್ಷದ್ವೀಪದ ಬಿಜೆಪಿಯ 15 ಜನ ಪದಾಧಿಕಾರಿಗಳು ಪಕ್ಷಕ್ಕೆ ರಾಜೀನಾಮೆ ನೀಡಿದರು.
ಕಳೆದ ತಿಂಗಳು ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ನಡೆ ವಿರುದ್ಧ ಬಿಜೆಪಿಯ ಎಂಟು ಜನ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದರು.
ಲಕ್ಷದ್ವೀಪದಲ್ಲಿ ಕೊರೋನಾ ಹರಡಲು ಬಿಜೆಪಿ ಜೈವಿಕ ಅಸ್ತ್ರ ಬಳಸಿದೆ ಎಂದು ಮಲಯಾಳ ಟೀವಿ ಚರ್ಚೆಯಲ್ಲಿ ಆಯಿಶಾ ಹೇಳಿದ್ದರೆಂದು ಅವರ ವಿರುದ್ಧ ದೇಶದ್ರೋಹದ ಪ್ರಕರಣ ಹೂಡಲಾಗಿದೆ. ಲಕ್ಷದ್ವೀಪದ ಬಿಜೆಪಿ ಬರಿದಾಗಿದೆ. ಈ ಪಕ್ಷದಲ್ಲಿ ಅಭಿಪ್ರಾಯ ಸ್ವಾತಂತ್ರ್ಯ ಇಲ್ಲ ಎಂದು ಅವರೆಲ್ಲ ಟೀಕಿಸಿದ್ದಾರೆ.