ಜಪಾನಿನ ಸುಯೇಶಿ (Hirotoshi) ಎಂಬ ವ್ಯಕ್ತಿಯನ್ನು ಕೆದಿಲ ಬಳಿ ಸ್ಥಳೀಯರು ಸಂಶಯಿಸಿ ಪೋಲೀಸರಿಗೆ ಮಾಹಿತಿ ನೀಡಿದ್ದರು. ಪುತ್ತೂರು ಪೋಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.
ಸುಯೇಶಿ ಪ್ರವಾಸಿ ವೀಸಾ ಮೇಲೆ ಭಾರತಕ್ಕೆ ಬಂದಿರುವ 33ರ ವ್ಯಕ್ತಿ. ಬೆಂಗಳೂರಿನಲ್ಲಿ ಕೆಲಸ ಹುಡುಕಿದರೆ ಸಿಕ್ಕಿಲ್ಲ. ಯಾರೋ ಮಂಗಳೂರಿಗೆ ಹೋಗಲು ಹೇಳಿದ್ದಾರೆ. ಸುಯೇಶಿ ನಡೆಯುತ್ತ ಬಂದಿರುವುದರಿಂದ ಬಾಡಿದ್ದ, ಬಟ್ಟೆಯೂ ಮುದುಡಿತ್ತು.