ಬಂಟ್ವಾಳ, ಅ 01: ಬಂಟ್ವಾಳದ ಎಸ್.ವಿ.ಎಸ್‍ ಕಾಲೇಜಿನಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಬಿ.ಸಿ.ಎ ಮುಗಿಸಿದ ಶಪೂನ್‍ಎಸ್ ಪೂಂಜ ಇವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಿದ ರಾಜ್ಯ ಮಟ್ಟದ ಪಿ.ಜಿ. ಸಿ.ಇ.ಟಿ ಪರೀಕ್ಷೆಯಎಂ.ಸಿ.ಎ ವಿಭಾಗದಲ್ಲಿ ಒಂಭತ್ತನೇ ರ್ಯಾಂಕ್ ಪಡೆದಿರುತ್ತಾರೆ. ಪ್ರತಿ ವರ್ಷವು ಪರೀಕ್ಷಾ ಪ್ರಾಧಿಕಾರವು ಎಂ.ಟೆಕ್, ಎಂ.ಸಿ.ಎ ಮುಂತಾದ ಉನ್ನತ ವ್ಯಾಸಂಗ ಮಾಡಲಿರುವ ವಿದ್ಯಾರ್ಥಿಗಳಿಗೆ ಈ ಪರೀಕ್ಷೆಯನ್ನು ನಡೆಸುತ್ತಿದ್ದು ಸಾವಿರಾರು ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಾರೆ.

ಇವರಿಗೆ ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಕೂಡಿಗೆ ಪಾಂಡುರಂಗ ಶೆಣೈ, ಕಾರ್ಯದರ್ಶಿಗಳಾದ ಕೂಡಿಗೆ ಪ್ರಕಾಶ್ ಶೆಣೈ ಮತ್ತು ಅನಿರುದ್ಧ ಕಾಮತ್ , ಶ್ರೀ ವೆಂಕಟರಮಣ ಸ್ವಾಮೀ ಸಮೂಹ ಸಂಸ್ಥೆಗಳ ಸಂಚಾಲಕರಾದ ಕೆ. ರೇಖಾ ಶೆಣೈ, ಶಾಲಾ ಮುಖ್ಯಸ್ಥರು, ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.