ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಹಾಗೂ ಭಾರತೀ ಪ್ರೌಢಶಾಲೆ ಉಳ್ಳಾಲ ಇದರ ವತಿಯಿಂದ ನಡೆದ ಜಿಲ್ಲಾ ಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ 17 ರ ವಯೋಮಿತಿಯ ಬಾಲಕರ ತಂಡ, 14ರ ವಯೋಮಿತಿಯ ಬಾಲಕ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನ ಗಳಿಸಿ ಚಾಮರಾಜನಗರದಲ್ಲಿ ನಡೆಯುವ ಮೈಸೂರು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವೈಯಕ್ತಿಕ ಬಹುಮಾನ 17ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ದೈವಿಕ್ ಸಿ ಪೂಜಾರಿ ಉತ್ತಮ ಆಲ್ ರೌಂಡರ್ ಮೂಡಿ ಬಂದಿರುತ್ತಾರೆ. 14ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ವಿಲೇಜ್ ಶೆಟ್ಟಿ ಉತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. 14ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಜೇನ್ ಜೆರುಶಾ ಪಿಂಟೋ ರವರು ಉತ್ತಮ ಆಟಗಾರ್ತಿಯಾಗಿ ಮೂಡಿ ಬಂದಿರುತ್ತಾರೆ. ವಿಜೇತ ತಂಡದ ಎಲ್ಲಾ ಸದಸ್ಯರಿಗೆ ಸಂಸ್ಥೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಅಲೋಸಿಯಸ್ ಡಿಸೋಜಾ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಮೋದ್ ಅಡಿಗ, ಸುಧಾಕರ್ ಮತ್ತು ಹರಿಣಾಕ್ಷಿ ಇವರು ಉಪಸ್ಥಿತದ್ದರು.