ವಿಂಬಲ್ಡನ್ ಟೆನ್ನಿಸ್‌ನಲ್ಲಿ ಈ ಬಾರಿ ಪುರುಷ, ಮಹಿಳಾ ಸಿಂಗಲ್ಸ್ ಎರಡೂ ವಿಭಾಗದಲ್ಲೂ ಚೊಚ್ಚಲ ಗ್ರಾನ್‌ಸ್ಲಾಮ್ ವಿಜೇತರೇ ಗೆದ್ದು ಬೀಗಿದರು.
ಮಹಿಳಾ ಸಿಂಗಲ್ಸ್‌ನಲ್ಲಿ ಜೆಕ್ ಗಣರಾಜ್ಯದ ಮೆರ್ಕೆಟಾ ವೊಂಡೋಸೊವ್ ಪ್ರಶಸ್ತಿ ಜಯಿಸಿದರು. ಇದು ಅವರ ಚೊಚ್ಚಲ ವಿಂಬಲ್ಡನ್ ಮತ್ತು ಗ್ರಾನ್‌ಸ್ಲಾಮ್ ಪ್ರಶಸ್ತಿ. ವೃತ್ತಿಪರ ಟೆನ್ನಿಸ್‌ನಲ್ಲಿ ಶ್ರೇಯಾಂಕ ರಹಿತೆಯಾಗಿ ಚೊಚ್ಚಲ ಗ್ರಾನ್‌ಸ್ಲಾಮ್ ಗೆದ್ದ ದಾಖಲೆಯೂ ಅವರದಾಯಿತು.
ಟ್ಯುನೀಶಿಯಾದ ಉನ್ಸ್ ಜಾಬಿರ್ ಸತತ ಎರಡನೆಯ ಬಾರಿ ರನ್ನರ್ ಅಪ್ ಆದರು. ಅಮೆರಿನ್ ಓಪನ್ ಗ್ರಾನ್‌ಸ್ಲಾಮ್ ಜಯಿಸಿ ಆಫ್ರಿಕಾ ವಲಯದ ಮೊದಲ ಗ್ರಾನ್‌ಸ್ಲಾಮ್ ವಿಜೇತೆ ಎನಿಸಿದ್ದರು. ಅನಂತರ ಮೂರು ಗ್ರಾನ್‌ಸ್ಲಾಮ್ ಫೈನಲ್‌ಗಳಲ್ಲಿ ರನ್ನರ್ ಅಪ್‌ಗೆ ತೃಪ್ತರಾಗುತ್ತಿದ್ದಾರೆ.
ವಿಂಬಲ್ಡನ್ ಪುರುಷರ ಸಿಂಗಲ್ಸ್‌ನಲ್ಲಿ ಸ್ಪೆಯಿನ್‌ನ ಕಾರ್ಲೊಸ್ ಅಲ್ಕನಾಜ್ ಚೊಚ್ಚಲ ಗ್ರಾನ್‌ಸ್ಲಾಮ್ ಗೆದ್ದು ಚಾಂಪಿಯನ್ ಎನಿಸಿದರು. ಟೆನ್ನಿಸ್ ಲೋಕದಲ್ಲಿ ಹಲವು ದಾಖಲೆಯ 35ನೇ ಬಾರಿ ಗ್ರಾನ್‌ಸ್ಲಾಮ್ ಫೈನಲ್‌ಗೆ ಏರಿದ್ದ, ಹಿಂದೆ 7 ಬಾರಿ ವಿಂಬಲ್ಡನ್ ಗೆದ್ದಿದ್ದ ಜಾಕೋವಿಕ್ ರನ್ನರ್ ಅಪ್‌ಗೆ ನಿಲ್ಲಬೇಕಾಯಿತು.