ಬಡಗಣ ಭಾರತದಲ್ಲಿ ಬಿಸಿಲಿನ ಆಘಾತದಿಂದ 46 ಮಂದಿ ಸಾವು ಕಂಡಿದ್ದರೆ ಜಾರ್ಖಂಡ್‌ನಲ್ಲಿ 4 ಮಂದಿಯ ಮರಣದ ಜೊತೆಗೆ ,1326 ಜನರು ಆಸ್ಪತ್ರೆಗೆ ಸೇರಿದ್ದಾರೆ.

ಜಾರ್ಖಂಡ್‌ನ ಮೂಲ ರಾಜ್ಯ ಬಿಹಾರದಲ್ಲಿ ಅತಿ ಹೆಚ್ಚು ಸನ್‌ಸ್ಟ್ರೋಕ್ ಸಾವು ಆಗಿದೆ. ಜಾರ್ಖಂಡ್‌ನ 24 ಜಿಲ್ಲೆಗಳಲ್ಲಿ 47 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಇದ್ದು, ಜನರು ಬೇಯುತ್ತಿದ್ದಾರೆ. 1,326 ಮಂದಿ ಬಿಸಿಲಿನಲ್ಲಿ ಬವಳಿ ಬಂದು ಆಸ್ಪತ್ರೆ ಸೇರಿದ್ದಾರೆ. ಅವರಿಗೆ ಹವಾನಿಯಂತ್ರಿತ ಕೋಣೆ ವ್ಯವಸ್ಥೆ ಮಾಡಲಾಗಿದೆ. ಪಾಲಮ್‌ನಲ್ಲಿ ಮೂವರು, ಜೆಮ್ಶೆಡ್ಪುರದಲ್ಲಿ ಒಬ್ಬರು ಎಂದು ನಾಲ್ವರು ದಾರಿ ಮಧ್ಯೆ ನೇಸರಾಘಾತದಿಂದ ಮೃತರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಮುಖ್ಯಸ್ಥ ಅಲೋಕ್ ತ್ರಿವೇದಿ ಹೇಳಿದ್ದಾರೆ.
ಪ್ರಾಣಿ ಪಕ್ಷಿಗಳ ಮೇಲೂ ಸೂರ್ಯ ಕಿರಣ ಬರೆ ಎಳೆದಿದೆ. ರಾಂಚಿ, ಹಜಾರಿಬಾಗ್ ಮೊದಲಾದ ಕಡೆ ಬಾವಲಿ ಮತ್ತು ಕೆಲವು ಹಕ್ಕಿಗಳು ಸತ್ತು ಬಿದ್ದಿರುವುದು ಕಂಡು ಬಂದಿದೆ.