ಮಂಗಳೂರು (ಅಕ್ಟೋಬರ್ 27):- ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ ಯು 2021-2022 ರ ಶೈಕ್ಷಣಿಕ ವರ್ಷಕ್ಕಾಗಿ 6ನೇ ಮತ್ತು 9 ನೇ ತರಗತಿಗಳ ಪ್ರವೇಶಕ್ಕೆ ದೇಶದಾದ್ಯಂತ 33 ಸೈನಿಕ ಶಾಲೆಗಳಲ್ಲಿ ಎಐಎಸ್‍ಎಸ್‍ಇ-2021 ರ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳಿಂದ ವೆಬ್‍ಸೈಟ್ ವಿಳಾಸ https://aissee.nta.nic.in ನಲ್ಲಿ ನವೆಂಬರ್ 19 ರೊಳಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.  ಜನವರಿ 10 ರಂದು ಪ್ರವೇಶ ಪರೀಕ್ಷೆಯನ್ನು ನಡೆಸಲಾಗುವುದು.

     ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ ವಿಳಾಸ  www.nta.ac.in ಹಾಗೂ www.sainikschoolkodagu.edu.in  ವೀಕ್ಷಿಸಬಹುದು ಎಂದು ಹಿರಿಯ ನಿರ್ದೇಶಕರು (ಎನ್.ಟಿ.ಎ) ಪ್ರಕಟನೆಯಲ್ಲಿ ತಿಳಿಸಿದ್ದಾರೆ.