ಸೆಂಟ್ರಲ್ ಮಾರ್ಕೆಟ್‍ನಿಂದ ಬೈಕಂಪಾಡಿ ಎ.ಪಿ.ಎಂ.ಸಿಗೆ ಸ್ಥಳಾಂತರಗೊಂಡ ತರಕಾರಿ ಸಗಟು ವ್ಯಾಪಾರಿಗಳ ಬದುಕು ಮೊದಲ ಮಳೆಗೇ ಕೊಚ್ಚಿ ಹೋಗಿದೆ. ಅವ್ಯವಸ್ಥೆಯ ಪರಮಾವಧಿಯಿಂದ ವ್ಯಾಪಾರಿಗಳು ಅತಂತ್ರರಾಗಿದ್ದಾರೆ. ಅವರ ಸರಕು ಸರಂಜಾಮುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯು ಈ ಬಗ್ಗೆ ವರದಿ ಸಲ್ಲಿಸಲು ಪರಿಶೀಲನಾ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಈ ಕೆಳಗಿನವರನ್ನು ನೇಮಿಸಲಾಗಿದೆ.
1.ಅಬ್ದುಲ್ ರವೂಫ್. (ಅಧ್ಯಕ್ಷರು)
ಸದಸ್ಯರುಗಳು
2.ಶಶಿಧರ ಹೆಗ್ಡೆ .
3.ಸದಾಶಿವ ಉಳ್ಳಾಲ್.
4.ಭಾಸ್ಕರ್ ಕೆ.
5.ಸಾಹುಲ್ ಹಮೀದ್.
6.ನವೀನ್ ಡಿಸೋಜ.
7.ವಸಂತ್ ಬರ್ನಾಡ್.
8.ಪ್ರವೀಣ್ ಚಂದ್ರ ಆಳ್ವ.
9.ಪ್ರತಿಭಾ ಕುಳಾಯಿ.
ಸದ್ರಿ ಸಮಿತಿಯು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ 2 ದಿನಗಳೊಳಗೆ ಸಮಗ್ರ ವರದಿಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಸಲ್ಲಿಸಲು ಜಿಲ್ಲಾಧ್ಯಕ್ಷರಾದ ಶ್ರೀ.ಕೆ.ಹರೀಶ್ ಕುಮಾರ್ ರವರು ಈ ಮೂಲಕ ನಿರ್ದೇಶನ ನೀಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್ ರವರು ತಿಳಿಸಿರುತ್ತಾರೆ.