ಉಡುಪಿ,(ಎಪ್ರಿಲ್ 20 ): ಪರಿಶಿಷ್ಟ ಜಾತಿಯ ಮೊಗೇರ ಜಾತಿಯವರೆಂದು ಸುಳ್ಳು ದಾಖಲೆ ನೀಡಿ, ಜಾತಿ ಪ್ರಮಾಣ ಪತ್ರ ಪಡೆದ ಮಾಧವ ಹಾಗೂ ಕವಿತಾ ಇವರಿಗೆ ನೀಡಿದ ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸಲಾಗಿದೆ. ಇವರು ಇನ್ನು ಮುಂದೆ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದಲ್ಲಿ ಸಂಬoಧಪಟ್ಟ ಕಂದಾಯ ನಿರೀಕ್ಷಕರು,

ಕಾನೂನು ಅನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಉಡುಪಿ ತಾಲೂಕು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.