ಮಂಗಳೂರು ಜು.15:- ಶಕ್ತಿನಗರದ ಶಕ್ತಿ ಪಪೂ ಕಾಲೇಜು 2018ರಲ್ಲಿ ಪ್ರಾರಂಭವಾಗಿರುವ ಹೊಸ ಕಾಲೇಜು. ಅನುಮತಿ ಸಿಗುವ ಸಂದರ್ಭದಲ್ಲಿ ಎಲ್ಲಾ ಕಡೆ ಕಾಲೇಜು ಪ್ರಾರಂಭವಾಗಿತ್ತು. ಪಪೂ ಶಿಕ್ಷಣ ಇಲಾಖೆಯು ಅನುಮತಿ ನೀಡಿ,ಅದೆ ಶೈಕ್ಷಣಿಕ ವರ್ಷದಲ್ಲಿ ತರಗತಿ ಪ್ರಾರಂಭ ಮಾಡುವುದಾರೆ ಮಾತ್ರ ಅನುಮತಿಯನ್ನು ಮುಂದುವರಿಸುತ್ತೇವೆ ಇಲ್ಲವಾದಲ್ಲಿ ರದ್ದು ಮಾಡುತ್ತೇವೆಂದು ಷರತ್ತು ವಿಧಿಸಿತು.
ಈ ಎಲ್ಲಾಗೊಂದಲದ ನಡುವೆ ನಮ್ಮ ಆಡಳಿತ ಮಂಡಳಿ ದಿಟ್ಟ ನಿರ್ಧಾರವನ್ನುತೆಗೆದುಕೊಂಡು ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದರು ಪ್ರವೇಶಾತಿಯನ್ನು ನೀಡಿ ಹೆಚ್ಚು ಅಂಕ ಪಡೆಯುವಂತೆ ಪಾಠ ಮಾಡಿ ಫಲಿತಾಂಶವನ್ನು ಬರುವಂತೆ ನೋಡಿಕೊಳ್ಳಬೇಕೆಂಬ ಆಶಯವನ್ನುಅಧ್ಯಾಪಕರಲ್ಲಿ ವ್ಯಕ್ತಪಡಿಸಿತು.
ಕನ್ನಡ ಮಾದ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಹಾಗೂ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿದರು ,ಅವರು ಅತಿ ಹೆಚ್ಚು ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.
ಶಕ್ತಿ ಪಪೂ ಕಾಲೇಜಿನಲ್ಲಿ ಒಟ್ಟು 22 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 8 ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 14 ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗುವುದರ ಮೂಲಕ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ 100% ಫಲಿತಾಂಶ ತಂದಿರುತ್ತಾರೆ. ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪ್ರೀಯಾ ವಿಯೋಣ ಡಿಸಿಲ್ವ, ಸಂಕಲ್ಪಗಿರೀಶ್, ಶರತ್‍ಕುಮಾರ್, ಖತೀಜರಹೀಫಾ, ರಹೀಲ್‍ಉಮ್ಮರ್ ಪಾರುಕ್‍ಅಬ್ಬು, ತುಷಾರ್, ಖದೀಜ ಸಾಹಮ, ಕೆ.ಟಿ ತರುಣ್ ಅಯ್ಯಪ್ಪ ವಿಶಿಷ್ಟ ಶ್ರೇಣಿಯಲ್ಲಿತೇರ್ಗಡೆಯಾಗಿರುತ್ತಾರೆ.
ಅಕ್ಷಯ ಆರ್ಚಾಯ ಬಿ, ಅನಿಲ್ ಕುಮಾರ್ ಎಸ್, ಋತ್ವಿಕ್ ಕೆ.ಟಿ, ಕೆ.ಎಸ್ ವರುಣ್, ಮಧುರಾಜ್ ಪಿ.ಸಿ, ನಝೀಲ ಪಾತಿಮಾ, ಪ್ರತಿಕ್‍ಎಸ್, ರಜತ್ ಆರ್‍ಗುಜರಾನ್, ಋತ್ವಿಕ್, ರಿಝಾ ಬಸೀರ್, ಸಾನಿಯಾ ಇರಾಂ, ಶ್ರೇಯಸ್ ಸೋಮಣ್ಣ ಪಿ.ಬಿ, ಸೈಯದ್ ಮಹಮ್ಮದ್ ಮೂಸಾ, ವಿಭಾ ಎಸ್ ,ಇವರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಇವರನ್ನು ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ. ಕೆ. ಸಿ ನಾೈಕ್, ಕಾರ್ಯದರ್ಶಿ ಸಂಜೀತ್ ನಾೈಕ್, ಪ್ರಧಾನ ಸಲಹೆಗಾರ ರಮೇಶ್‍ಕೆ, ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರ ಜಿ.ಎಸ್, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ ಕಾಮಾತ್ ಅಭಿನಂದಿಸಿದ್ದಾರೆ.