ಮೂಡುಬಿದಿರೆ:ಮೂಡುಬಿದಿರೆ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಯವರಿಂದ ಆಗಸ್ಟ್10 ರಿಂದ  ಸೆಪ್ಟೆಂಬರ್ 17 ರವರೆಗೆ ವೆಬ್ ನೆರ್ ಮೂಲಕ ನಿರಂತರ  ವಿವಿಧ ಜೈನ ಸಂಘ ಟನೆಗಳ ಪ್ರಾಯೋಜಕತ್ವದೊಂದಿಗೆ ಪ್ರವಚನ ಕಾರ್ಯಕ್ರಮ ನೆರವೇರಿತು.

 ಜೈನ ರ ಹೆಚ್ಚಿನ ಪರ್ವ, ಭಾದ್ರಪದ ಮಾಸದಲ್ಲೇ ಆಚರಿಸುವ ರೂಢಿ ಹೆಚ್ಚಾಗಿದೆ. ಷೋಡಶ ಭಾವನೆಗಳೆಂದರೆ ಹದಿನಾರು ಭಾವನೆಗಳೆಂದಾಗುತ್ತದೆ. ಅದರ ಜತೆಗೆ ದಶ  ಲಕ್ಷಣ ಪರ್ವ 23 ಅಗೋಸ್ಟ್ ನಿಂದ 2 ಸೆಪ್ಟೆಂಬರ್ ವರೆಗೆ ಆಚರಿಸಿ ಕ್ಷಮಾ ವಾಣಿ ಪರ್ವ ಸೆಪ್ಟೆಂಬರ್  3 ರಿಂದ ನಿರಂತರ ಈ ತಿಂಗಳು ಸೆಪ್ಟೆಂಬರ್ 17 ಕ್ಕೆ ದುಬೈ ಮಧ್ಯ ಪ್ರಾಚ್ಯ  ಅರಿಹಂತ್ ಮಂಡಲ ಜೈನ್ ಸಂಸ್ಥೆ ಯ ವತಿಯಿಂದ ವೆಬ್ ನೈರ್ ಮೂಲಕ ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಪಾವನ ಉಪಸ್ಥಿತಿಯಲ್ಲಿ ನೇರವೇರಿತು.

 ಶ್ರೀ ಗಳು ಮಧ್ಯ ಪ್ರಾಚ್ಯ ದ ಜೈನ ಬಂದುಗಳಿಗೆ ಕ್ಷಮೆಯ ಮಹತ್ತ್ವ ತಿಳಿಸಿ ಪರಸ್ಪರ ಚಿಕ್ಕ ಪುಟ್ಟ ತಪ್ಪು ಗಳನ್ನು ಮನ್ನಿಸಿ ಕ್ಷಮಿಸು ವ ಗುಣ ಹೆಚ್ಚಿಸಿ ಕೊಂಡಾಗ ಜೀವನ ದಲ್ಲಿ ನೆಮ್ಮದಿ ಸಾಧ್ಯ ಎಂದು ನುಡಿದರು. ಕ್ರೋದ ದಿಂದ ಎಲ್ಲಾ ಮಾನವೀಯ ಗುಣ  ನಾಶವಾಗುತ್ತದೆ. ಮನಸ್ಸಿನ ಮೇಲೆ ದೇಹದ ಮೇಲೆ ಸಿಟ್ಟು ಮಾಡುದ ರಿಂದ ದುಷ್ಪರಿಣಾಮ ಉಂಟಾಗುತ್ತದೆ ಎಂದರು.

 ಈ ಬಾರಿ, ಈ ಹದಿನಾರು ಕಾರಣ ಭಾವನೆಗಳನ್ನು .ಆಗಸ್ಟ್ 3 ರಿಂದ ಸೆಪ್ಟೆಂಬರ್ 3 ರ ವರೆಗೂ ಕ್ಷಮಾವಳಿ ಪರ್ವ 03 ರಿಂದ ಸೆಪ್ಟೆಂಬರ್ 17 ರ ವರೆಗೂ ವೆಬ್ ನೆರ್ ಚಿಂತನೆ ಮೂಲಕ  ಆಚರಣೆ ಮಾಡ ಲಾಯಿತು 16 ಭಾವನೆ ಹಾಗೂ ದಶ ಲಕ್ಷಣ  ಚಿಂತನೆಯಿಂದ   ತೀರ್ಥಂಕರ ಪ್ರಕೃತಿಯು ಬಂಧವಾಗುತ್ತದೆ . ಅವು ಮೋಕ್ಷಕ್ಕೆ ಕಾರಣವಾಗಿವೆಯೆಂದು ಜಿನ ಆಗಮ ಗಳ ಲ್ಲಿ ತಿಳಿಸ ಲಾಗಿದೆ ಎಂದು ಶ್ರೀ ಗಳು ತಮ್ಮ ಪ್ರವಚನ ಮೂಲಕ  ನುಡಿದರು.

ಈ ಬಾರಿ ದಶ ಲಕ್ಷಣ ಪರ್ವ ಅಮೇರಿಕಾ ದೇಶದ ಸಿದ್ಧಚಲಂ ತೀರ್ಥ ದ ವೆಬ್ ನೆರ್ ಮೂಲಕ ಮೂಡುಬಿದಿರೆ ಸ್ವಾಮೀಜಿ 10 ದಿನ ದಶ ಲಕ್ಷಣ ಹಾಗೂ ತತ್ತ್ವಾರ್ಥ ಸ್ತೋತ್ರ ಪಠಣ, ಹಾಗೂ  ಪ್ರವಚನ ನೀಡಿದರು ಕ್ಷಮಾವಳಿ ಪರ್ವ ಸೆಪ್ಟೆಂಬರ್ 3ರಿಂದ  ಪ್ರಾರ 0ಭಿಸಿ ಮೂಡುಬಿದಿರೆ, ಅಮೇರಿಕಾ, ಇಂದೋರ್,ಕೋಲ್ಕೊತಾ, ದೆಹಲಿ ಯ ಜೈನ್ ಸ್ಮಾರಕ ಟ್ರಸ್ಟ್ ದಿಗಂಬರ ಶ್ವೇತಾoಬರ ಜಂಟಿ ಕ್ಷಮಾವಳಿ  ಹಾಗೂ ನಿನ್ನೆ  17.9.2020 ದುಬಾಯಿ ಅರಿಹಂತ್ ಮಂಡಳಿಯ ಕಾರ್ಯಕ್ರಮದಲ್ಲಿ ಆಶೀರ್ವಾದ ನೀಡಿದರು.

ಮಣಿಂದ್ರ ಜೈನ್,  ಶ್ರೀ ದಿಗಂಬರ ಮಹಾ ಸಮಿತಿ ರಾಷ್ಟ್ರೀಯ ಅಧ್ಯಕ್ಷ ರು, ನಿರ್ಮಲ ಕುಮಾರ್ ಸೇಠಿ ದೆಹಲಿ, ಅಖಿಲ ಭಾರತ ದಿ. ಜೈನ ಸಭಾ ಅಧ್ಯಕ್ಷ, ಹಸ್ಮುಖ್ ಗಾಂಧಿ, ಸಾಹು ಅಖಿಲೇಶ್, ಜ್ಞಾನ ಪೀಠ ಫೌಂಡೇಶನ್,  ಸುರೇಂದ್ರ ಕುಮಾರ್ ಧರ್ಮಸ್ಥಳ,  ಅನಿಲ್ ಜೈನ್ ದೆಹಲಿ,  ಪ್ರದೀಪ್ ಪಾಟ್ನಿ, ದುಬೈ,  ಪಾಟ್ನಿ ಕಂಪ್ಯೂಟರ್ಸ್, ಅನಿಲ್ ಜೈನ್ ಕೆನಡಾ, ಕುಮಾರ್ ಶಾ, ಜೈಪತ್ ಸಿಂಗ್  ವಿಶಿಷ್ಟ ಅತಿಥಿ ಗಳಾಗಿ ಭಾಗವಸಿದ್ದರು.