ಮಂಗಳೂರು:- ಅಕ್ಟೋಬರ್ 19, 20, 2020 ರಂದು ಮಂಗಳೂರು ಮಿಲಾಗ್ರಿಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಹೆತ್ತವರು/ಪೋಷಕರಿಗಾಗಿ ಆನ್‌ ಲೈನ್ ಶಿಕ್ಷಕ ರಕ್ಷಕ ಸಭೆಯನ್ನು ಆಯೋಜಿಸಲಾಯಿತು.

ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ವಂ. ಗುರುಗಳಾದ ಮೈಕಲ್ ಸಂತುಮಾಯಾರ್ ಹೆತ್ತವರನ್ನು ಸ್ವಾಗತಿಸಿ, ವಿಶ್ವವಿದ್ಯಾಲಯದ ಮಾರ್ಗ ಸೂಚಿಗಳು ಹಾಗೂ ಪ್ರೋಟೊಕೋಲ್ಸ್  ಬಗ್ಗೆ ಮಾಹಿತಿಯನ್ನು ನೀಡಿದರು. ಆಫ್ ಲೈನ್ ತರಗತಿಗಳಿಗಿಂತ  ಆನ್‌ ಲೈನ್ ತರಗತಿಗಳು ಕಡ್ಡಾಯ ಹಾಗೂ ಆನ್ಲೈನ್ ತರಗತಿಯ ಹಾಜರಾತಿ ಪ್ರತಿಯೊಂದು ವಿದ್ಯಾರ್ಥಿಗಳಿಗೆ ಬಹು ಮುಖ್ಯ ಎಂದು ಮಾಹಿತಿ ನೀಡಿದರು. ಕೊನೆಯಲ್ಲಿ ಆನ್‌ ಲೈನ್ ಕ್ಲಾಸಿನ ಅನಿಸಿಕೆಗಳ ಬಗ್ಗೆ ಹೆತ್ತವರಿಗೆ ಫೀಡ್ ಬ್ಯಾಕ್ ಫಾರ್ಮ್ ನೀಡಲಾಯಿತು. ಈ ಸಭೆಯಲ್ಲಿ ಎಲ್ಲ ಉಪನ್ಯಾಸಕರು ಭಾಗವಹಿಸಿದರು.