ಮಂಗಳೂರು:- ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ನಮ್ಮನ್ನು ಅಗಲಿದ ಬಿಜೆಪಿ ನಾಯಕರು ರಾಜ್ಯಸಭಾ ಸದಸ್ಯರಾದ ಅಶೋಕ್ ಗಸ್ತಿ ಅವರ ಶ್ರದ್ದಾಂಜಲಿ ಮತ್ತು ನುಡಿನಮನ ಕಾರ್ಯಕ್ರಮವು ನಮ್ಮ ಮಂಡಲ ಅಧ್ಯಕ್ಷರಾದ ವಿಜಯಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಹಿರಿಯರಾದ ನಿತಿನ್ ಕುಮಾರ್ ರವರು ಗಸ್ತಿ ಅವರ ಬಗ್ಗೆ ನುಡಿ ನಮನಗಳನ್ನು ತಿಳಿಸಿದರು, ಈ ಸಂದರ್ಭದಲ್ಲಿ ಮುಡಾದ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ಮಂಡಲದ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ,ಮನಪಾ ಸದಸ್ಯರು ,ಈ ಭಾವನಾತ್ಮಕ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.
