ಮಂಗಳೂರು:- ಭಾರತ  ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು, ಯುವಕ, ಯುವತಿ ಮತ್ತು ಮಹಿಳಾ ಮಂಡಲ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ 02/10/2020 151 ನೇ  ಗಾಂಧಿ ಜಯಂತಿ ಕಾರ್ಯಕ್ರಮವನ್ನು ನಗರದ ರವೀಂದ್ರ ಕಲಾ ಭವನ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನಲ್ಲಿ ಆಯೋಜಿಸಲಾಗಿತ್ತು. 

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ರಘುವೀರ್ ಸೂಟರ್‍ ಪೇಟೆ ಜಿಲ್ಲಾ ಯುವ ಸಮನ್ವಯಾಧಿಕಾರಿ, ನೆಹರು ಯುವ ಕೇಂದ್ರ ಮಂಗಳೂರು ರವರು ಮಾತನಾಡಿ ಗಾಂಧೀಜಿಯ ತತ್ವ ಸಿದ್ದಾಂತ ಮತ್ತು ಪರಿಕಲ್ಪನೆಯು ಯುವ ಜನರಿಗೆ ಮಾದರಿಯಾಗಬೇಕೆಂದು ತಿಳಿಸಿದರು. ಹಾಗೂ ಮುಂದಿನ 1 ವರ್ಷದವರೆಗೆ  ಸ್ವಚ್ಚತಾ ಅಭಿಯಾನ, ಫಿಟ್ ಇಂಡಿಯಾ ಯೂತ್ ಕ್ಲಬ್ ಹಾಗೂ ಇತರ ಫಿಟ್ನೆಸ್ ಕಾರ್ಯಕ್ರಮಗಳು ಮತ್ತು (ಓ.ಇ.P) ರಾಷ್ಟ್ರೀಯ ಶಿಕ್ಷ ನೀತಿ 2020 ವಿಚಾರವಾಗಿ ತಳವiಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನರನ್ನು ತಲುಪುವ ಬಗ್ಗೆ ಕಾರ್ಯಯೋಜನೆಯನ್ನು ಮಾಡಲಾಗಿದೆಯೆಂದು ತಿಳಿಸಿದರು. 

ಕಾರ್ಯಕ್ರಮವನ್ನು ಸನ್ಮಾನ್ಯ ಮಹಾಪೌರರಾದ  ದಿವಾಕರ್ ಪಾಂಡೇಶ್ವರರವರು ದೀಪ ಪ್ರಜ್ವಲನೆ ಮಾಡುವ ಮುಖಾಂತರ ಉದ್ಘಾಟಿಸಿದರು. ಗಾಂಧೀಜಿಯವರ ಆಶಯದಂತೆ  ಗ್ರಾಮ ಸ್ವರಾಜ್ ವ್ಯವಸ್ಥೆಯ ಮಟ್ಟದಲ್ಲಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ದಿಯ ನಿಟ್ಟಿನಲ್ಲಿ ಯುವ ಮಂಡಲಗಳು ಹೆಚ್ಚಿನ ಪಾತ್ರ ವಹಿಸುವಂತೆ ಕರೆಕೊಟ್ಟರು. ಕಾರ್ಯಕ್ರಮದ ಮುಖ್ಯ ಅತಿಥಿಯಾದ ಉದಯ ಕುಮಾರ್ ಎಂ ಎ ಪ್ರಾಂಶುಪಾಲರು ವಿಶ್ವವಿದ್ಯಾನಿಲಯ ಕಾಲೇಜ್ ಮಂಗಳೂರು ಇವರು ಗಾಂಧೀಜಿಯ ತತ್ವ ಸಿದ್ದಾಂತಗಳನ್ನು ಯುವ ಜನತೆ ಮೈ ಗೂಡಿಸಿಕೊಳ್ಳುವ ಮೂಲಕ ಆದರ್ಶ ಸಮಾಜ ನಿರ್ಮಾಣಕ್ಕೆ ಸಾಧ್ಯ ಎಂದು ತಿಳಿಸಿದರು. ಕಾರ್ಯಕ್ರಮದ  ಅಧ್ಯಕ್ಷತೆಯನ್ನು ದಿನಕರ ಶೆಟ್ಟಿ ವಕೀಲರು, ಸಾಮಾಜಿಕ ಹೋರಾಟಗಾರರು ವಹಿಸಿಕೊಂಡರು. ಅಧ್ಯಕ್ಷ್ಷೀಯ ಭಾಷಣದಲ್ಲಿ ಗ್ರಾಮ ಅಭಿವೃದ್ದಿ ಹಾಗೂ ಸ್ವದೇಶ ಉತ್ಪನ್ನಗಳ ಬಳಕೆಯನ್ನು ಪರಿಕಲ್ಪನೆಯನ್ನು ಯುವ ಮಂಡಳಿಗಳು ಜನ ಸಾಮಾನ್ಯರಿಗೆ ತಲುಪಿಸುವ ಮೂಲಕ ಜಾಗೃತಿ ಗೊಳಿಸಿ ಈ ಮೂಲಕ ದೇಶದ ಅಭಿವೃಧಿಯನ್ನು ಪಾತ್ರ ವಹಿಸಬೇಕಾಗಿ ತಿಳಿಸಿದರು. 

ಕಾರ್ಯಕ್ರಮದಲ್ಲಿ ನೂತನ ಮಹಾಪೌರರಾದ ಹಾಗೂ ವಿಶ್ವವಿದ್ಯಾನಿಲಯದ ಹಳೇ ವಿದ್ಯಾರ್ಥಿಯಾದ ದಿವಾಕರ ಪಾಂಡೇಶ್ವರರವರಿಗೆ ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರಿಂದ ಸನ್ಮಾನ ಮಾಡಲಾಯಿತು. ನೆಹರು ಯುವ ಕೇಂದ್ರದ ತಾಲೂಕು ಪ್ರತಿನಿಧಿಗಳಾದ ವಿಕಾಸ್ ಕುಂಪಲ, ಸುಶ್ಮಿತ ಮೂಡಬಿದ್ರಿ, ತೀಕ್ಷಿತ್ ಬೆಳ್ತಂಗಡಿ, ಪ್ರೀತೇಶ್ ಹಾಗೂ ಯುವ ನಾಯಕರುಗಳಾದ ರಚನಾ ಶೆಟ್ಟಿ, ಸುರಕ್ಷ, ರಕ್ಷಾ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು  ದೇವಿಪ್ರಸಾದ್ ಶೆಟ್ಟಿಯವರು ನಿರೂಪಿಸಿ  ಪ್ರೀತೇಶ್‍ರವರು ವಂದನಾರ್ಪಣ ಗೈದರು.