ಮೊನ್ನೆ ಬೆಳ್ತಂಗಡಿ ಸುತ್ತ ಮುತ್ತ ಆದಂತಹ ಜಲ ಪ್ರವಾಹ ಆದ ಪ್ರದೇಶ ಗಳಲ್ಲಿ ತೋಟ, ಗದ್ದೆ, ಮನೆಗೆ ಬಿದ್ದಂತಹ ಕೆಸರು ಮಣ್ಣು, ಕಲ್ಲು ಮರಗಳ ರಾಶಿ ಸಂಪೂರ್ಣ ತೆಗೆಯಲು ಸದ್ಯಕ್ಕಂತೂ ಸಾಧ್ಯವಿಲ್ಲ. ಅಲ್ಲಿ ಪರಿಸ್ಥಿತಿ ಹೇಗಿದೆ, ಯಾವ ರೀತಿ ಜಲ ಪ್ರವಾಹ ಆಗಿದೆ ಎಂಬುದನ್ನು ಅಲ್ಲಿ ಹೋಗಿ ಪ್ರತ್ಯಕ್ಷ ನೋಡಿದರೆ ಮಾತ್ರ ಗೊತ್ತಾಗುವುದು.
ಕೂಕ್ಕಾವ್, ಕಡಿರುದ್ಯಾವರ, ಮಲವಂತಿ ಗೆ, ಕೊಳಂಬೆ, ಹೊಸಮಠ, ಚಾರ್ಮಾಡಿ....ಇಂತಹ ಪ್ರದೇಶಗಳಲ್ಲಿ ಭೂಕುಸಿತ, ಜಲ ಪ್ರವಾಹ ಆದ ತಾಣಗಳಿಗೆ ಜನಪ್ರತಿನಿಧಿ ಗಳು, ಅಧಿಕಾರಿಗಳು, ಪರಿಹಾರ ನೀಡುವವರು, ಮಾದ್ಯಮ ಪತ್ರಕರ್ತರು ಬರ್ತಾರೆ, ಹೋಗ್ತಾರೆ...ಒಂದಷ್ಟು ಸಂಘಟನೆಗಳು ಶ್ರಮ ದಾನದ ಮೂಲಕ ಕೆಸರು ಮಣ್ಣು ತೆಗೆಯುವ ಕಾರ್ಯ ಆಗ್ತಾ ಇದೆ. ಆದರೆ ಪ್ರಧಾನ ರಸ್ತೆಯ ಒಳಭಾಗದ ಅಂದರೆ ಕಾಡಿನ ಒಳ ಪ್ರದೇಶಗಳಲ್ಲಿ ಬಹಳಷ್ಟು ಕಡೆ ಭೂಕುಸಿತ ಆಗಿರುತ್ತವೆ. ಇದು ಹೆಚ್ಚಿನ ಜನರ ಗಮನಕ್ಕೆ ಬಾರದೇ ಹಾಗೆ ಉಳಿದಿದೆ. ನಂದಿ ಕಾಡು, ಸಿಂಗನಾರ್, ಪರ್ಲಿದಡಿ, ದೈಪಿತ್ತಿಲು, ಮಕ್ಕಿ, ಪರ್ಲಾ ಮುಂತಾದ ಕಡೆ ಹಲವಾರು ಪ್ರದೇಶಗಳಲ್ಲಿ ಭೂಕುಸಿತ ಆಗಿವೆ. ಅವರೆಲ್ಲರೂ ನೆರೆ ಸಂತರಸ್ತರಿಗಾಗಿ ಸಿಗುವ ಸವಲತ್ತು ಹಾಗೂ ಶ್ರಮ ದಾನದ ಅವಕಾಶ ವಂಚಿತರಾಗಿ ಉಳಿದಿರು ತ್ತಾರೆ. ನಿನ್ನೆ ಅರಣ್ಯ ರಕ್ಷಕ ರಾಜು ಹಾಗೂ ಶಿಕ್ಷಕಿ ಮಮತಾ ಅವರ ನೇತೃತ್ವದಲ್ಲಿ ಕಾವೂರು ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಪ್ರಮೀಳಾ ಹಾಗೂ ಪತ್ರಕರ್ತ ಹರ್ಷ ಅವರ ಬೆಂಬಲದೊಂದಿಗೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಂದಿ ಕಾಡು ಹಾಗೂ ಸಿಂಗಣಾರ್ ಅರಣ್ಯ ಪ್ರದೇಶದ ಒಳಗೆ ಆಗಿರುವ ಭೂಕುಸಿತ ಪ್ರದೇಶಕ್ಕೆ ಶ್ರಮದಾನ ಕ್ಕೆಂದು ಹೋದಾಗ ಅಲ್ಲಿ ಆಗಿರುವ ದುರಂತ ಭಯಾನಕ. 10 ರಿಂದ 12 ಅಡಿ ಗಾತ್ರದ ಕಲ್ಲುಗಳು ಬೆಟ್ಟದ ಮೇಲಿಂದ 2 km ನಷ್ಟು ದೂರದಿಂದ ಬಂದು ಅವರ ತೋಟಕ್ಕೆ ಬಿದ್ದಿದೆ ಎಂದರೆ ಅದನ್ನು ಊಹಿಸುವುದು ಕಷ್ಟ...ಕೇವಲ 3 ಅಡಿ ಅಗಲದ ಚಿಕ್ಕ ಒಂದು ತೊರೆ 100 ಅಡಿ ಅಗಲ ಆಗಿ ತೋಟ, ಕಾಡು, ಕಣಿವೆ ಎಲ್ಲವನ್ನೂ ಕೊಚ್ಚಿಕೊಂಡು ಹೋಗಿದೆ.
ನೀರು ಏಕಾಏಕಿ ಬಹಳ ಎತ್ತರವಾಗಿ ಕಲ್ಲು, ದೊಡ್ಡ ದೊಡ್ಡ ಮರಗಳನ್ನ ಎಳೆದುಕೊಂಡು ಭಯಂಕರ ಸದ್ದು ಮಾಡಿಕೊಂಡು ಬರುತ್ತಿರುವುದನ್ನು ಕಣ್ಣಾರೆ ಕಂಡು ದಿಗಿಲಾಗಿ ಭಯದಿಂದ ಮನೆ ಬಿಟ್ಟು ಓಡಿ ಹೋಗಿ ಎತ್ತರದ ಪ್ರದೇಶದಲ್ಲಿ ಕಂಡ ಆ ಮನೆಯ ಶ್ರೀನಿವಾಸ ಮತ್ತು ಗುಲಾಬಿ ಇಂದಿಗೂ ಆ ಭಯದಿಂದ ಹೊರಗೆ ಬರಲಿಲ್ಲ. ದುರಂತ ಆದ ಅಂದಿನಿಂದ ಇಂದಿನವರೆಗೂ ರಾತ್ರಿ ನಿದ್ದೆ ಮಾಡಲು ಭಯ ಪಟ್ಟು ನಿದ್ದೆ ಇಲ್ಲದೇ ಸುಮ್ಮನೆ ಕುಳಿತಿರುತ್ತಾರೆ..ನಿನ್ನೆ ಅವರ ಮನೆಗಳಿಗೆ ಹೋಗಿ ಮಾತನಾಡಿಸಿ ದಾಗ ಪ್ರಾಕೃತಿಕ ದುರಂತದ ಕರಾಳ ಭಯದ ಛಾಯೆ ಇನ್ನೂ ಅಲ್ಲಿ ಹಾಗೆಯೇ ಉಳಿದಿದೆ.
Dinesh Holla (Environmentalist )