ಬಂಟ್ವಾಳ:  ಇಟಲಿಯಲ್ಲಿ ನಡೆದ 2019ರ ವಿಂಟರ್ ಡೆಫಾಲಿಂಪಿಕ್ಸ್‌ನ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ  ಕಲ್ಲಡ್ಕ ಶ್ರೀ ರಾಮ  ಪದವಿಪೂರ್ವ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ  ಯಶಸ್ವಿ ಕೆ. ಭಾರತವನ್ನು ಪ್ರತಿನಿಧಿಸಿ ಮೂರನೇ ಸ್ಥಾನ ಪಡೆದಿದ್ದಾರೆ. ಇವರಿಗೆ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರು, ಆಡಳಿತ ಮಂಡಳಿ ಹಾಗೂ ಉಪನ್ಯಾಸಕರು, ಉಪನ್ಯಾಸಕೇತರರು ಅಭಿನಂದನೆಯನ್ನು ಸಲ್ಲಿಸಿದ್ದಾರೆ .