ನಿನ್ನೆ ಸಸ್ಯಾಹಾರ, ಇವತ್ತು ಮಾಂಸಾಹಾರ. ಪಕ್ಕದ ಮನೆಯ ಸುಮತಿ ಅಕ್ಕ ನಿನ್ನೆ ಅಷ್ಟಮಿ ಮತ್ತು ಇಂದು ಮೊಸರು ಕುಡಿಕೆಗೆ ನೀಡಿದ ಹಬ್ಬದ ಉಡುಗೊರೆಯಿದು.
ನಮ್ಮ ಅಪಾರ್ಟ್ ಮೆಂಟ್ ನಲ್ಲಿ ಹಲವು ಜಾತಿ, ಧರ್ಮ, ಭಾಷೆ, ಪಕ್ಷ, ಪಂಗಡಗಳ ಜನ ಒಂದೇ ಕುಟುಂಬದ ಸದಸ್ಯರಂತೆ ಬದುಕುತ್ತಿದ್ದೇವೆ. ಅಡುಗೆ ಕೋಣೆಯಿಂದ ಫಲಾಹಾರಗಳು ಆಚೀಚೆ ಚಲಾವಣೆಯಾಗುತ್ತಲೇ ಇರುತ್ತವೆ. ಯಾವುದೇ ಹಬ್ಬಗಳು ಬರಲಿ, ಅಡುಗೆಯ ರುಚಿ ಸವಿಯಲೇ ಬೇಕೆಂಬ ತುಳುನಾಡಿನ ಸೊಬಗು ನಮ್ಮದು.
ಬಹುತ್ವ ಭಾರತದ ಒಂದು ಪ್ರಾಯೋಗಿಕ ರೂಪ ಇದೇ ಅಲ್ಲವೇ?
ಅಂದಹಾಗೆ ಇಂದು ಸುಮತಿ ಅಕ್ಕ ಮೂಡೆ ಮತ್ತು ಮಟನ್ ಕರಿ ನೀಡಿದಾಗ ನಾನಂದೆ 'ನಿಮ್ಮ ಮನೆಯಲ್ಲಿ ಪ್ರತಿದಿನವೂ ಹಬ್ಬವಾಗಲಿ'. ಅದಕ್ಕವರು ಮತ್ತು ನನ್ನಾಕೆ ಜೊತೆಯಾಗಿ 'ಆಮೀನ್' ಎಂದರು.
ಎಲ್ಲ ಸಹೋದರ, ಸಹೋದರಿಯರು ಮತ್ತು ಮಿತ್ರರಿಗೆ ಹಬ್ಬದ ಶುಭಾಶಯಗಳು.
*ಉಮರ್ ಯು.ಹೆಚ್.*