ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಕಲೆಗಳ ಅಧ್ಯಯನ ಕೇಂದ್ರವಾದ ಯಕ್ಷಕಲಾ ಕೇಂದ್ರದ ಆಶ್ರಯದಲ್ಲಿ ಮಾರ್ಚ್ 21ರಂದು ನಡೆಸಲುದ್ದೇಶಿಸಲಾದ ‘ಫಿಲೋ ಯಕ್ಷೋತ್ಸವ’ ಕಾರ್ಯಕ್ರಮವನ್ನು ಕೊರೊನಾ ವೈರಸ್ ಮುನ್ನೆಚ್ಚರಿಕೆ ಕ್ರಮವಾಗಿ ಮುಂದೂಡಲಾಗಿದೆ. ಈ ಕಾರ್ಯಕ್ರಮದ ಮುಂದಿನ ದಿನಾಂಕವನ್ನು ಪ್ರಕಟಿಸಲಾಗುವುದು. ಎಲ್ಲಾ ಸಹೃದಯ ಕಲಾಸಕ್ತರು ಸಹಕರಿಸಬೇಕು ಎಂದು ಕಾಲೇಜಿನ ಪಿಆರ್ಒ ಪ್ರಕಟಣೆ ತಿಳಿಸಿದೆ.