ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 2 ವಾರಗಳಂದೀಚೆಗೆ ಕೋವಿಡ್-19 ಸೋಂಕು ಹರಡುವಿಕೆಯ ಪ್ರಕರಣಗಳು ತೀವ್ರವಾಗಿ ಹೆಚ್ಚಳವಾಗುತ್ತಿದೆ.
ಅದರಂತೆ ಈ ವಿಷಯವನ್ನು ತಜ್ಞರು ವಿವರವಾಗಿ ಪರಿಶೀಲಿಸಿ, ಕೋವಿಡ್-19 ಸೋಂಕಿನ ಹರಡುವಿಕೆಯನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಪರಿಣಾಮಕಾರಿಯಾಗಿ ನಿಯಂತ್ರಿಸಲು ಹಾಗೂ ಹತೋಟಿಗೆ ತರಲು ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯವಾಗಿರುತ್ತದೆ ಎಂಬ ಸಲಹೆಯನ್ನು ನೀಡಿರುತ್ತಾರೆ.
ಈ ಹಿನ್ನೆಲೆಯಲ್ಲಿ, ವಿಪತ್ತು ನಿರ್ವಹಣೆ ಕಾಯ್ದೆ, 2005ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜಿಲ್ಲಾ ವಿಪತ್ತು ನಿರ್ವಹಣೆಯ ಅಧಕ್ಷರಾದ ಈ ಕೆಳಗೆ ಸಹಿ ಮಾಡಿರುವ ನಾನು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಾಂಕ:15.07.2020ರ ರಾತ್ರಿ 8.00 ಗಂಟೆಯಿಂದ 23.07.2020ರ ಬೆಳಿಗ್ಗೆ 5.00 ಗಂಟೆಯವರೆಗೆ 7 ದಿನಗಳ ಅವಧಿಯವರೆಗೆ ಲಾಕ್‌ಡೌನ್ ಅನ್ನು ಆದೇಶಿಸಿದ್ದೇನೆ.
ಈ ಆದೇಶದಲ್ಲಿ ನೀಡಲಾಗಿರುವ ಲಾಕ್ ಡೌನ್ನ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಅಧಿಕಾರಿಗಳು ಪೊಲೀಸ್ ಆಯುಕ್ತರು, ಮಂಗಳೂರು ನಗರ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು, ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರು, ಸಹಾಯಕ ಆಯುಕ್ತರುಗಳು, ಹಾಗೂ ತಹಶೀಲ್ದಾರರುಗಳು ಆಗಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಗಾಗಿಮಾರ್ಗಸೂಚಿಗಳು:-
1. 23ನೇ ಜುಲೈ 2020 ರ ಬೆಳಿಗ್ಗೆ 5.00 ಗಂಟೆಯವರೆಗೆ ಲಾಕ್ ಡೌನ್ ಜ್ಯಾರಿಯಲ್ಲಿರುತ್ತದೆ.
2. ರಾಜ್ಯ ಸರ್ಕಾರದ ಕಛೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು ನಿಗಮ ಮುಂತಾದುವುಗಳು ಮುಚ್ಚಿರತಕ್ಕದ್ದು .
ವಿನಾಯಿತಿಗಳು (ಕಂಟೈನ್ಮೆಂಟ್ ವಲಯದ ಹೊರಗೆ:
ಎ) ಆರೋಗ್ಯ, ವೈದಕೀಯ ಶಿಕ್ಷಣ, ಪೊಲೀಸ್, ಗೃಹ ರಕ್ಷಕ ದಳ, ನಾಗರಿಕರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ವಿಪತ್ತು ನಿರ್ವಹಣೆ, ಮಂಗಳೂರು ಮಹಾನಗರಪಾಲಿಕೆ ಹಾಗೂ ಕಾರಾಗೃಹಗಳು.
ಬಿ) ವಿದ್ಯುತ್, ನೀರು, ನೈರ್ಮಲ್ಯ ಇತ್ಯಾದಿ ಅಗತ್ಯ ಸೇವೆಗಳನ್ನು ನಿರ್ವಹಿಸುವ ಎಲ್ಲಾ ಕಛೇರಿಗಳು,
ಸಿ) ಮಂಗಳೂರು ಮಹಾನಗರ ಪಾಲಿಕೆ, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಹಾಗೂ ಜಿಲ್ಲಾಧಿಕಾರಿ ಕಛೇರಿ ಹಾಗೂ ಅಧೀನ ಕಛೇರಿಗಳು,
ಡಿ) ನ್ಯಾಯಾಲಯಗಳು ಹಾಗೂ ನ್ಯಾಯಾಂಗ ಕೆಲಸಗಳಿಗೆ ಸಂಬಂಧಿಸಿದ ಕಛೇರಿಗಳು-ಮಾನ್ಯ ಉಚ್ಚ ನ್ಯಾಯಾಲಯವು ಹೊರಡಿಸಿರುವ ಮಾರ್ಗಸೂಚಿಗಳನ್ವಯ ಕಾರ್ಯ ನಿರ್ವಹಿಸತಕ್ಕದ್ದು.
ಇ) ಕೋವಿಡ್-19ಗೆ ಸಂಬಂಧಿಸಿದ ಕಾರ್ಯಕ್ಕೆ ನಿಯೋಜಿಸಿದ ಎಲ್ಲಾ ಕಛೇರಿಗಳು, ಅಧಿಕಾರಿ ಹಾಗೂ ಸಿಬ್ಬಂದಿಗಳು.
ಎಫ್) ಜಿಲ್ಲಾ ಖಜಾನೆಗಳು ಮತ್ತು ಅಧೀನ ಜಿಲ್ಲಾ ಖಜಾನೆಗಳು.
3, ಕೇಂದ್ರ ಸರ್ಕಾರದ ಕಛೇರಿಗಳು, ಅದರ ಸ್ವಾಯತ್ತ/ಅಧೀನ ಕಛೇರಿಗಳು ಹಾಗೂ ಸಾರ್ವಜನಿಕ ಸಂಸ್ಥೆಗಳು ಮುಚ್ಚಿರತಕ್ಕದ್ದು.
ವಿನಾಯಿತಿಗಳು (ಕಂಟೈನ್ ಮೆಂಟ್ ವಲಯದ ಹೊರಗೆ):-
ಎ) ರಕ್ಷಣೆ, ರಕ್ಷಣೆ ಪಿ.ಎಸ್.ಯುಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಹಾಗೂ ದೂರ ಸಂಪರ್ಕ
ಬಿ) ಅಗತ್ಯ ಸೇವೆಗಳನ್ನು ನಿರ್ವಹಿಸುವಂತಹ ಕಛೇರಿಗಳು,
ಸಿ) ಖಜಾನೆ (ವೇತನ ಮತ್ತು ಲೆಕ್ಕಪತ್ರಗಳ ಕಛೇರಿಗಳು, ಹಣಕಾಸು ಸಲಹೆಗಾರರು ಹಾಗೂ ಮಹಾ ಲೆಕ್ಕ ನಿಯಂತ್ರಕರ ಕ್ಷೇತ್ರ ಕಛೇರಿಗಳು ಕನಿಷ್ಟ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸುವುದು).
ಡಿ) ಸಾರ್ವಜನಿಕ ಉಪಯುಕ್ತತೆಗಳು, ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ಘಟಕಗಳು, ಅಂಚೆ ಕಛೇರಿಗಳು, ವಿಪತ್ತು ನಿರ್ವಹಣೆ ಹಾಗೂ ಮುನ್ಸೂಚನಾ ಏಜೆನ್ಸಿಗಳು (ಪೆಟ್ರೋಲ್, ಸಿ.ಎನ್.ಜಿ, ಎಲ್.ಪಿ.ಜಿ, ಪಿ.ಎನ್.ಜಿ ಒಳಗೊಂದಂತೆ),
ಇ) ರಾಷ್ಟ್ರೀಯ ಮಾಹಿತಿ ಕೇಂದ್ರಗಳು.
ಎಫ್) ವಿಮಾನ ನಿಲ್ದಾಣಗಳಲ್ಲಿ/ಭೂ ಗಡಿಗಳಲ್ಲಿ ಕಾರ್ಯ ನಿರ್ವಹಿಸುವ ಕಸ್ಟಮ್ ಗಳು, ಜಿ.ಎಸ್.ಟಿ.ಎನ್, ಎಂ.ಸಿ.ಎ-21 ರಿಜಿಸ್ಟ್ರಿ, ಕನಿಷ್ಟ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸುವುದು.
ಜಿ) ಬ್ಯಾಂಕುಗಳು, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಆರ್.ಬಿ.ಐ. ನಿಯಂತ್ರಿತ ಹಣಕಾಸು ಮಾರುಕಟ್ಟೆ, NPCI ಮತ್ತು CCIL ನಂತಹ ಘಟಕಗಳು, ಪಾವತಿ ವ್ಯವಸ್ಥೆಯ ಪ್ರವರ್ತಕರು ಮತ್ತು ಸ್ವತಂತ್ರ ಪ್ರಾಥಮಿಕ ವ್ಯಾಪಾರಿಗಳು/ ಡೀಲರುಗಳು / ವಿತರಕರು ಕನಿಷ್ಠ ಸಂಖ್ಯೆಯ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸುವುದು.
4. ಎಲ್ಲಾ ಆರೋಗ್ಯ ಸೇವೆಗಳು (ಆಯುಷ್ ಮತ್ತು ಪಶುವೈದ್ಯಕೀಯ ಆಸ್ಪತ್ರೆಗಳು) ಕಾರ್ಯ ನಿರ್ವಹಿಸುವುದು: (ಕಂಟೆಂಟ್ ವಲಯದ ಹೊರಗೆ)
ಎ) ಎಲ್ಲಾ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಕ್ಲಿನಿಕ್ ಗಳು, ಲ್ಯಾಬ್ ಗಳು, ಸಂಗ್ರಹಣಾ ಕೇಂದ್ರಗಳು,ಮೆಡಿಸನ್ ಸೌಲಭ್ಯಗಳು, ಡಿಸ್ಪೆನ್ಸರಿಗಳು, ಫಾರ್ಮಸಿಗಳು, ಕೆಮಿಸ್ಸ ಜನ ಔಷಧಿ ಕೇಂದ್ರಗಳು, ಗೃಹ ಆರೈಕೆದಾರರು ಮತ್ತು ವೈದ್ಯಕೀಯ ಉಪಕರಣಗಳ ಅಂಗಡಿಗಳು ಸೇರಿದಂತೆ ಎಲ್ಲಾ ಔಷಧಿ ಅಂಗಡಿಗಳು.
ಬಿ) ಎಲ್ಲಾ ಫಾರ್ಮಸಿಟಿಕಲ್ ಹಾಗೂ ರಿಸರ್ಚ್ ಲ್ಯಾಬ್ ಗಳು.
ಸಿ) ಔಷಧಿಗಳು, ಔಷಧೀಯ ವೈದ್ಯಕೀಯ ಸಾಧನಗಳು, ಮೆಡಿಕಲ್ ಆಕ್ಸಿಜನ್ ಅವುಗಳ ಪ್ಯಾಕಿಂಗ್ ಸಾಮಗ್ರಿ, ಕಚ್ಚಾ ಸಾಮಗ್ರಿ ಹಾಗೂ ಮಧ್ಯವರ್ತಿಗಳ ಎಲ್ಲಾ ತಯಾರಿಕಾ ಘಟಕಗಳು.
ಡಿ) ವೈದ್ಯಕೀಯ / ಆರೋಗ್ಯ ಮೂಲ ಸೌಕರ್ಯಕ್ಕೆ ಸಂಬಂಧಿಸಿದ ಎಲ್ಲಾ ನಿರ್ಮಾಣಗಳು.
ಇ) ಎಲ್ಲಾ ವೈದ್ಯಕೀಯ, ಅರೆ ವೈದ್ಯಕೀಯ, ಶೂದ್ರೂಷಕರು, ವಿಜ್ಞಾನಿಗಳು, ಲ್ಯಾಬ್ ಟೆಕ್ನಿಷಿಯನ್ಗಳು, ಮಿಡ್-ವೈವ್ ಹಾಗೂ ಇತರೆ ಆಸ್ಪತ್ರೆ ಪೂರಕ ಸೇವೆಗಳು (ಅಂತರ್ ರಾಜ್ಯ ಹಾಗೂ ರಾಜ್ಯದೊಳಗೆ ಮತ್ತು ಅಂತರ್ ಜಿಲ್ಲೆ ಹಾಗೂ ಜಿಲ್ಲೆಯೊಳಗೆ).
5, ಕೃಷಿ ಹಾಗೂ ಕೃಷಿಗೆ ಸಂಬಂಧಿತ ಚಟುವಟಿಕೆಗಳು ಕಾರ್ಯನಿರ್ವಹಿಸುವವು (ಕಂಟೈನ್ಮೆಂಟ್ ವಲಯದ ಹೊರಗಿ)'
6, ಕೀರ ಸಂಸ್ಕರಣಾ ಕೇಂದ್ರಗಳಿಂದ ಸಾರಿಗೆ ಮತ್ತು ಪೂರೈಕೆಯನ್ನು ಒಳಗೊಂಡಂತೆ ಹಾಲು ಮತ್ತು ಹಾಲಿನ ಉತ್ ಸಂಸ್ಕರಣೆ, ವಿತರಣೆ ಮತ್ತು ಮಾರಾಟ.
7. ಸಾಮಾಜಿಕ ವಲಯ: ಕಂಟೈನ್‌ಮೆಂಟ್ ವಲಯ ಹೊರತುಪಡಿಸಿ, ಈ ಕೆಳಕಂಡ ಕಾರ್ಯ ಚಟುವಟಿಕೆಗಳು ಕಾರ್ಯ ನಿರ್ವಹಿಸುವುದು.
ಎ) ಮಕ್ಕಳು/ಅಂಗವಿಕಲರು, ಮಾನಸಿಕ ಅಸ್ವಸ್ಥರು, ಹಿರಿಯ ನಾಗರಿಕರು/ ಅನಾಥರು/ಮಹಿಳೆಯರು/ವಿಧವೆಯರು ಮುಂತಾದವರಆರೈಕೆ ಸಂಸ್ಥೆಗಳ ಕಾರ್ಯ ನಿರ್ವಹಣೆ.
ಬಿ) ಪಾಲನಾ ಗೃಹಗಳು, ಆರೈಕೆ ಕೇಂದ್ರಗಳು ಮತ್ತು ಮಕ್ಕಳ ಸುರಕ್ಷತಾ ಸ್ಥಳಗಳು.
ಸಿ) ಸಾಮಾಜಿಕ ಭದ್ರತಾ ಪಿಂಚಣಿಗಳ ವಿತರಣೆ.ಉದಾ: ವೃದ್ದರು/ವಿಧವೆಯರು/ ಸ್ವಾತಂತ್ರಯೋಧರ ಪಿಂಚಣಿಗಳು, ಇಪಿಎಫ್ಓ ಒದಗಿಸುವ ಪಿಂಚಣಿಗಳು ಮತ್ತು ಭವಿಷ್ಯ ನಿಧಿ ಸೇವೆಗಳು.
ಡಿ) ಅಂಗನವಾಡಿಗಳ ಕಾರ್ಯ ನಿರ್ವಹಣೆಗೆ ಮಕ್ಕಳು, ಮಹಿಳೆಯರು ಮತ್ತು ಹಾಲುಣಿಸುವ ತಾಯಂದಿರು ಮುಂತಾದ ಫಲಾನುಭವಿಗಳ ಮನೆ ಬಾಗಿಲಿಗೆ ಆಹಾರ ಮತ್ತು ಪೌಷ್ಠಿಕ ಸಾಮಾಗ್ರಿಗಳನ್ನು 15 ದಿನಗಳಿಗೊಮ್ಮೆ ವಿತರಿಸುವುದು. ಆದರೆ, ಫಲಾನುಭವಿಗಳು ಅಂಗನವಾಡಿಗಳಿಗೆ ಭೇಟಿ ನೀಡಬಾರದು.
ಇ) ಕೋವಿಡ್-19 ನಿರ್ವಹಣೆಗಾಗಿ ಇರುವ ರಾಷ್ಟ್ರೀಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೆ ಒಳಪಟ್ಟು ಎಂಎನ್‌ಆರ್‌ಇಜಿ ಕಾಮಗಾರಿಗಳನ್ನು ನಿರ್ವಹಿಸುವುದು.
8. ಎಲ್ಲಾ ಬಗೆಯ ಸರಕು ಸಾಗಣೆಗಳ ಅನಿರ್ಬಂಧಿತ ಚಲನೆ (ಕಂಟೈನ್ ಮೆಂಟ್ ವಲಯ ಹೊರತುಪಡಿಸಿ): ಟ್ರಕ್‌ಗಳ ಮೂಲಕ (ಖಾಲಿ ಟ್ರಕ್‌ಗಳು)/ಸರಕು ವಾಹನಗಳು ಸೇರಿದಂತೆ ರೈಲು ಮತ್ತು ವಿಮಾನದ ಮೂಲಕ ಎಲ್ಲಾ ಬಗೆಯ ಸರಕುಗಳ ಸಾಗಾಟ.
9. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಈ ಕೆಳಕಂಡ ಕಾರ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ:
ಎ) ಈಗಾಗಲೇ ವೇಳಾಪಟ್ಟಿ ನಿಗದಿಯಾಗಿರುವ ವಿಮಾನ ಹಾಗೂ ರೈಲುಗಳು ಲಾಕ್‌ಡೌನ್ ಅವಧಿಯಲ್ಲಿನ ಸಂಚಾರವನ್ನು ಮುಂದುವರೆಸಿದೆ. ವಿಮಾನ ಮತ್ತು ರೈಲು ಟಿಕೆಟ್ ಗಳನ್ನು ವಿಮಾನ ಮತ್ತು ರೈಲುಗಳಲ್ಲಿ ಓಡಾಡುವ ಪ್ರಂ ಪರಿಗಣಿಸಲಾಗುವುದು.ಅಲ್ಲದೇ, ಟ್ಯಾಕ್ಸಿ ಮತ್ತು ಆಟೋ ರಿಕ್ಷಾಗಳ ಮೂಲಕ ನಿಲ್ದಾಣಕ್ಕೆ ಪ್ರಯಾಣಿಸಲು ಅನುಮತಿಸಿದೆ.
ಬಿ) ತುರ್ತು ಪರಿಸ್ಥಿತಿಗಾಗಿ ಬಾಡಿಗೆ ತೆಗೆದುಕೊಂಡವುಗಳನ್ನು ಹೊರತುಪಡಿಸಿ, ಟ್ಯಾಕ್ಸಿಗಳು (ಆಟೋ ರಿಕ್ಷಾಗಳು ಸೇರಿದಂತೆ) ಮತ್ತು ಕ್ಯಾಬ್ ಚಾಲನಾ ಸಂಸ್ಥೆಗಳು,
ಸಿ) ಶಾಲೆಗಳು, ಕಾಲೇಜುಗಳು, ಶಿಕ್ಷಣ/ತರಬೇತಿ/ ಕೋಚಿಂಗ್ ಮುಂತಾದ ಸಂಸ್ಥೆಗಳು ಮುಚ್ಚುವುದು, ಆನ್‌ಲೈನ್/ದೂರ ಶಿಕ್ಷಣ ಕಲಿಕೆಗೆ ಅವಕಾಶವನ್ನು ಮುಂದುವರೆಸಿ ಅವುಗಳನ್ನು ಪ್ರೋತ್ಸಾಹಿಸಬೇಕು. ಆದರೆ, ಈಗಾಗಲೇ ವೇಳಾಪಟ್ಟಿ ನಿಗದಿಯಾದ ಪರೀಕ್ಷೆಗಳಿಗೆ ಕೋವಿಡ್-19 ನಿರ್ವಹಣೆಗಾಗಿ ಇರುವ ರಾಷ್ಟ್ರೀಯ ನಿರ್ದೇಶನಗಳಿಗೆ ಒಳಪಟ್ಟು ಅವಕಾಶ ನೀಡುವುದು.
ಡಿ) ಆರೋಗ್ಯ/ಪೊಲೀಸ್ /ಸರ್ಕಾರಿ ಸೇವಾ ಸಿಬ್ಬಂದಿ/ಆರೋಗ್ಯಕಾರ್ಯಕರ್ತರು ಪ್ರವಾಸಿಗರು ಸೇರಿದಂತೆ ಉದ್ದೇಶಿಸಿದ ಮತ್ತು ಕ್ವಾರಂಟೈನ್ ಸೌಲಭ್ಯಗಳಿಗೆ ಉದ್ದೇಶಿಸಿ ಉಳಿದಂತೆ ಹೋಟೆಲ್ಗಳು, ರೆಸ್ಟೋರೆಂಟ್ಗಳು ಮತ್ತು ಇತರೆ ಆತಿಥ್ಯ ಸೇವೆಗಳ ನಿರ್ಬಂಧ, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳನ್ನು ಆಹಾರ ತಯಾರಿಕೆಗೆ/ಸರಬರಾಜು ಉದ್ದೇಶಕ್ಕಾಗಿ ಮಾತ್ರ ತೆರೆಯಲು ಅನುಮತಿಸಿದೆ.
ಇ) ಎಲ್ಲಾ ಸಿನಿಮಾ ಮಂದಿರಗಳು, ಶಾಪಿಂಗ್ ಮಾಲ್ಗಳು, ಜಿಮ್ಯಾಷಿಯಮ್ಗಳು, ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಂಗಳು, ಈಜುಕೊಳಗಳು,ಮನರಂಜನಾ ಉದ್ಯಾನವನಗಳು, ರಂಗಮಂದಿರಗಳು, ಬಾರ್ಗಳು ಹಾಗೂ ಆಡಿಟೋರಿಯಂಗಳು, ಸಭಾಭವನಗಳು ಮತ್ತು ಅದೇ ಬಗೆಯ ಇತರೆ ಸ್ಥಳಗಳು,
ಎಫ್) ಎಲ್ಲಾ ಸಾಮಾಜಿಕ/ರಾಜಕೀಯ/ಕ್ರೀಡಾ/ಮನರಂಜನಾ/ಶೈಕ್ಷಣಿಕ/ಸಾಂಸ್ಕೃತಿಕ/ಧಾರ್ಮಿಕ ಸಮಾರಂಭಗಳು/ಇತರೆ ಸಭೆಗಳು ಹಾಗೂ ಬೃಹತ್ ಜನಸ್ತೋಮಗಳು.
ಜಿ) ಎಲ್ಲಾ ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳನ್ನು ಸಾರ್ವಜನಿಕರಿಗೆ ಮುಚ್ಚಬೇಕು. ಧಾರ್ಮಿಕ ಸಭೆಗಳಿಗೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ.
ಜನರ ಚಲನೆ:
ಎ) ಕೆ.ಎಸ್.ಆರ್.ಟಿ.ಸಿ., ಖಾಸಗಿ ಬಸ್ ಗಳು ಮತ್ತು ಖಾಸಗಿ ವಾಹನಗಳ ಮೂಲಕ ವ್ಯಕ್ತಿಗಳ ಚಲನೆಯನ್ನು ಮಾರ್ಗಸೂಚಿಯಲ್ಲಿ ಅನುಮತಿಸಿರುವುದನ್ನು ಹೊರತುಪಡಿಸಿ ನಿಷೇಧಿಸಿದೆ.
ಬಿ) ತುರ್ತು ಸಂದರ್ಭಗಳಲ್ಲಿ ಅಥವಾ ಈ ಮಾರ್ಗಸೂಚಿಗಳಲ್ಲಿ ಅನುಮತಿಸಿದ ಸಂದರ್ಭಗಳಲ್ಲಿ ಮಾತ್ರ ಪ್ರಯಾಣಿಕ ವಾಹನಗಳು ಚಲಿಸುವುದು ಮತ್ತು ವೈದ್ಯಕೀಯ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗುವುದು.
ಸಿ) ಮಾರ್ಗಸೂಚಿಗಳಿ ಅನುಮತಿಸಿದ ಕಾರ್ಯ ಚಟುವಟಿಕೆಗಳಿಗಾಗಿ ಕೆಲಸದ ಸ್ಥಳಕ್ಕೆ ಈ ಕಚೇರಿ ಸಂಸ್ಥೆಯಿಂದ ನೀಡಿದ ಅರ್ಹ ಗುರುತಿನ ಚೀಟಿಯೊಂದಿಗೆ ಸಿಬ್ಬಂದಿಯ ಪ್ರಯಾಣ.
a) ತರೀಕೆಗೆ ಹಾಜರಾಗುವ ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನೇ ಪ್ರಯಾಣದ ಪರವಾನಗಿ ಮತ್ತು ಅವರಿಗೆ ಲಭ್ಯವಿರುವ ಟ್ಯಾಕ್ಸಿ/ಆಟೋರಿಕ್ಷಾ ಒಳಗೊಂಡಂತೆ ಸಾರಿಗೆ ವಿಧಾನವನ್ನು ಬಳಸಿಕೊಳ್ಳಬಹುದು. ಎಫ್) ಎಸ್.ಎಸ್.ಎಲ್.ಸಿ.,ಮೌಲ್ಯಮಾಪನಾ ಕೇಂದ್ರಗಳಿಗೆ ತೆರಳುವ ಶಿಕ್ಷಕರಿಗೆ ಅನುಮತಿಸಲಾಗಿದೆ
10. ವಾಣಿಜ ಮತ್ತು ಖಾಸಗಿ ಸಂಸ್ಥೆಗಳು ಮುಚತಕ್ಕದು ವಿನಾಯಿತಿಗಳು (ಕಂಟೋನ್ಮೆಂಟ್ ವಲಯದ ಹೊರಗೆ):
ಎ) ಬೆಳಿಗ್ಗೆ 8.00 ಗಂಟೆಯಿಂದ ಮಧ್ಯಾಹ್ನ 11.00 ಗಂಟೆಯವರೆಗೆ ಪಡಿತರ ಅಂಗಡಿಗಳು (ಪಿ.ಡಿ.ಎಸ್.), ದಿನಸಿ ಅಂಗಡಿ ಸೇರಿದಂತೆ ಆಹಾರ, ದವಸ ಧಾನ್ಯಗಳು, ಹಣ್ಣುಗಳು ಹಾಗೂ ತರಕಾರಿ, ಇತ್ಯಾದಿ. ಈ ಎಲ್ಲಾ ಕಾರ್ಯಗಳನ್ನು ಕೋವಿಡ್ ನಿರ್ವಹಣೆಗಾಗಿ ಇರುವ ರಾಷ್ಟ್ರೀಯ ನಿರ್ದೇಶನಗಳಿಗನುಸಾರವಾಗಿ ಮಾಡಬೇಕು.
ಬಿ) ಎಲ್ಲಾ ಆಹಾರ ಸಂಸ್ಕರಣೆ ಮತ್ತು ಸಂಬಂಧಿತ ಕೈಗಾರಿಕೆಗಳು
ಸಿ) ಬ್ಯಾಂಕುಗಳು, ವಿಮಾ ಕಛೇರಿಗಳು ಮತ್ತು ಎ.ಟಿ.ಎಂ.
ಡಿ) ಪತ್ರಿಕಾ ಮತ್ತು ವಿದ್ಯುನ್ಮಾನ ಮಾಧ್ಯಮ
ಇ) ದೂರ ಸಂಪರ್ಕ, ಅಂತರ್ಜಾಲ ಸೇವೆಗಳು, ಪ್ರಸರಣ ಮತ್ತು ಕೇಬಲ್ ಸೇವೆಗಳು, ಮಾಹಿತಿ ತಂತ್ರಜ್ಞಾನ ಸೇವೆಗಳು ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳು ಹಾಗೂ ಅತ್ಯವಶ್ಯಕ ಸೇವಾ ನೀಡಿಕೆ ಮತ್ತು ನಿರ್ವಹಣಾ ಸೇವೆಗಳು ಕನಿಷ್ಟ ಸಿಬ್ಬಂದಿಗಳೊಂದಿಗೆ ಅತ್ಯವಶ್ಯಕ ಸೇವೆಗಳನ್ನು ನಿರ್ವಹಿಸುವುದು. ಇವೆಲ್ಲವುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಮನೆಯಿಂದಲೇ ನಿರ್ವಹಿಸುವುದು.
ಎಫ್) ಇ-ಕಾಮರ್ಸ್ ಮುಖಾಂತರ ಆಹಾರ, ಔಷಧಿಗಳು, ಔಷಧ ವಸ್ತುಗಳು, ವೈದ್ಯಕೀಯ ಸಲಕರಣೆಗಳಂತೆ ಅಗತ್ಯ ವಸ್ತುಗಳ ಸರಬರಾಜು.
ಜಿ) ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣಾ ಘಟಕಗಳು ಮತ್ತು ಸೇವೆಗಳು.
ಹೆಚ್) ಭಾರತೀಯ ಭದ್ರತೆಗಳು, ವಿನಿಮಯ ಮಂಡಳಿಯ ಬಂಡವಾಳ ಹಾಗೂ ಋಣ ಮಾರುಕಟ್ಟೆ ಸೇವೆಗಳು.
ಐ) ಶೀತಲಿಕರಣ ಘಟಕಗಳು ಹಾಗೂ ಉಗ್ರಾಣ ಸೇವೆಗಳು.
ಜೆ) ಖಾಸಗಿ ಭದ್ರತಾ ಸೇವೆಗಳು, ಸಾಧ್ಯವಾದರೆ ಇತರೆ ಎಲ್ಲಾ ಸಂಸ್ಥೆಗಳು ಮನೆಯಿಂದಲೇ ಕಾರ್ಯ ನಿರ್ವಹಿಸುವುದು.
ಕೆ) ಇ-ಕಾಮರ್ಸ್ ಮುಖಾಂತರ ಸರಕು ಸರಬರಾಜು. ಉಳಿದ ಸಂಸ್ಥೆಗಳು ಅಗತ್ಯವಿರುವಲ್ಲಿ ಮನೆಯಿಂದಲೇ ಕರ್ತವ್ಯ ನಿರ್ವಹಿಸುವುದು.
11. ಈ ಕೆಳಗೆ ಪಟ್ಟಿ ಮಾಡಿದ ಕೈಗಾರಿಕೆಗಳು / ಕೈಗಾರಿಕಾ ಸಂಸ್ಥೆಗಳು (ಸರ್ಕಾರಿ ಮತ್ತು ಖಾಸಗಿ ಎರಡು) ಕಾರ್ಯಾಚರಿಸಲು ಅವಕಾಶವಿರತಕ್ಕದ್ದು (ಕಂಟೈನ್ ಮೆಂಟ್ ವಲಯದ ಹೊರಗೆ),
ಎ) ನಿರಂತರ ಕಾರ್ಯ ಪ್ರಕ್ರಿಯೆ ಮತ್ತು ಅದರ ಪೂರೈಕೆಗೆ ಅಗತ್ಯವಿರುವ ಉತ್ಪಾದನಾ ಘಟಕಗಳು.
ಬಿ) ಆಹಾರ ಸಂಸ್ಕರಣಾ ಕೈಗಾರಿಕೆಗಳು, ಔಷಧಗಳು, ಔಷಧ ವಸ್ತುಗಳು, ವೈದ್ಯಕೀಯ, ವೈದ್ಯಕೀಯ ಉಪಕರಣಗಳು, ಅವುಗಳ ಕಚ್ಚಾ ಹಾಗೂ ಅವಶ್ಯಕ ಪದಾರ್ಥಗಳನ್ನು ಒಳಗೊಂಡಂತೆ ಅತ್ಯವಶ್ಯಕ ವಸ್ತುಗಳ ಉತ್ಪಾದನೆ.
ಸಿ) ಪ್ಯಾಕಿಂಗ್ ಸಾಮಾಗ್ರಿಗಳ ಉತ್ಪಾದನೆ.
ಡಿ) ಕೋವಿಡ್-19 ನಿರ್ವಹಣೆಗಾಗಿ ಇರುವ ರಾಷ್ಟ್ರೀಯ ನಿರ್ದೇಶನಗಳನ್ನು ಪಾಲಿಸುವ ಷರತ್ತಿಗೊಳಪಟ್ಟು ವಿಶೇಷ ಆರ್ಥಿಕ ವಲಯಗಳು ಮತ್ತು ರಫ್ತು ಆಧಾರಿತ ಘಟಕಗಳು ಕೈಗಾರಿಕಾ ಟೌನ್‌ಗಳಲ್ಲಿ ನಿಯಂತ್ರಣಾವಕಾಶ ಹೊಂದಿರುವ ಉತ್ಪಾದನಾ ಮತ್ತು ಇತರ 'ಔದ್ಯಮಿಕ ಸಂಸ್ಥೆ,
12) ಕಂಟೈನ್‌ಮೆಂಟ್ ವಲಯಗಳು:
ಎ) ಕಂಟೈನ್ಮೆಂಟ್ ವಲಯಗಳಲ್ಲಿ ಅತ್ಯಗತ್ಯ ಕಾರ್ಯ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡತಕ್ಕದ್ದು. ವೈದ್ಯಕೀಯತುರ್ತು ಸೇವೆಗಳ ಮತ್ತು ಅತ್ಯಗತ್ಯ ಸರಕು ಮತ್ತು ಸೇವೆಗಳ ಪೂರೈಕೆಯ ಹೊರತು ಈ ವಲಯಗಳಲ್ಲಿ ಮತ್ತು ವಲಯಗಳ ಹೊರಗೆ
ವ್ಯಕ್ತಿಗಳ ಚಲನೆಗೆ ಕಟ್ಟುನಿಟ್ಟಿನ ಪರಿಧಿಯನ್ನು ನಿಗದಿಪಡಿಸತಕ್ಕದ್ದು.
ಬಿ) ಕಂಟೈನ್ಮೆಂಟ್ ವಲಯಗಳಲ್ಲಿ, ತೀವ್ರವಾದ ಸಂಪರ್ಕ ಪತ್ತೆ, ಕ್ವಾರಂಟೈನ್ ನಿಗಾವಣೆ, ಮನೆ-ಮನೆ ನಿಗಾವಣೆ, ಮನೆಯಲ್ಲಿಯೇ ಇರತಕ್ಕದ್ದಕ್ಕೆ ನಿಗಾವಣೆ ಮತ್ತು ಅಗತ್ಯವಾದಂತಹ ಇತರೆ ಕ್ಲಿನಿಕಲ್ ಮಧ್ಯಸ್ಥಿಕೆ ನಿಗಾವಣೆ
13) ದುರ್ಬಲ ವ್ಯಕ್ತಿಗಳ ರಕ್ಷಣೆ: 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, ಸಹ-ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಗತ್ಯ ಮತ್ತು ಆರೋಗ್ಯ ಉದ್ದೇಶಗಳನ್ನು ಹೊರತುಪಡಿಸಿ ಮನೆಯಲ್ಲಿಯೇ ಇರಲು ಸಲಹೆ ನೀಡಲಾಗಿದೆ.
14) ಆರೋಗ್ಯ ಸೇತು ಆ್ಯಪ್ ಬಳಕೆ:
ಎ) ಸೋಂಕಿನ ಸಂಭವನೀಯ ಆಪಾಯವನ್ನು ಮೊದಲೆ ಗುರುತಿಸಲು ಆರೋಗ್ಯ, ಸೇತು ಅನುವು ಮಾಡಿಕೊಡುತ್ತದೆ ಮತ್ತು ಇದು ವ್ಯಕ್ತಿಗಳ ಹಾಗೂ ಸಮುದಾಯಕ್ಕೆ ರಕ್ತ ಕವಚವಾಗಿ ಕಾರ್ಯ ನಿರ್ವಹಿಸುತ್ತದೆ.
ಬಿ) ಉದ್ಯೋಗದಾತರು, ಕಛೇರಿಗಳು ಮತ್ತು ಕರ್ತವ್ಯ ಸ್ಥಳಗಳಲ್ಲಿ ಸುರಕತೆಯನ್ನು ಖಾತರಿಪಡಿಸುವ ಉದ್ದೇಶದಿಂದ, ಉತ್ತಮ ಯದ ಆಧಾರದ ಮೇಲೆ ಆರೋಗ, ಸೇತುವನು. ಎಲಾ ಉದ್ಯೋಗಿಗಳು ಹೊಂದುವಂತಹ ಮೊಬೈಲ್ ಫೋನ್‌ಗಳನ್ನು ಹೊಂದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು.
ಸಿ) ಜಿಲ್ಲಾಡಳಿತವು ಪ್ರತಿಯೊಬ್ಬರು ಆರೋಗ್ಯ, ಸೇತು ಹೊಂದಾಣಿಕೆಯ ಮೊಬೈಲ್ ಫೋನ್ ಗಳಲ್ಲಿ ಆರೋಗ್ಯ ಸೇತು ಅಪ್ಲಿಕೇಶನ್‌ನ್ನು ಅಳವಡಿಸಲು ಮತ್ತು ಅಪ್ಲಿಕೇಶನ್‌ನಲ್ಲಿ ನಿಯಮಿತವಾಗಿ ಅವರ ಆರೋಗ್ಯ ಸ್ಥಿತಿಯನ್ನು ನವೀಕರಿಸಲು ವ್ಯಕ್ತಿಗಳಿಗೆ ಸಲಹೆ ನೀಡುತ್ತದೆ.
15) ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು:
- ಈ ಕ್ರಮಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರರುಗಳನ್ನು ಘಟನಾ ಕಮಾಂಡರ್ (Incident Commander) ಆಗಿ ನಿಯೋಜಿಸಲಾಗಿದೆ. ಘಟನಾ ಕಮಾಂಡರ್‌ರವರು ತಮ್ಮ ತಮ್ಮ ಅಧಿಕಾರ ವ್ಯಾಪ್ತಿಯ ಪ್ರದೇಶಗಳಲ್ಲಿ ಈ ಕ್ರಮಗಳನ್ನು ಸಂಪೂರ್ಣವಾಗಿ ಅನುಷ್ಟಾನಗೊಳಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.
16) ದಂಡನೀಯ ಉಪಬಂಧಗಳು: - ಕೋವಿಡ್-19 ನಿರ್ವಹಣೆಯ ಲಾಕ್‌ಡೌನ್ ಕ್ರಮಗಳ ಬಗ್ಗೆ ರಾಷ್ಟ್ರೀಯ ನಿರ್ದೇಶನಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯು, ವಿಪತ್ತು ನಿರ್ವಹಣಾ ಕಾಯ್ದೆ, 2005ರ ಸೆಕ್ಷನ್ 51 ರಿಂದ 60ರ ಉಪಬಂಧಗಳು, ಅಲ್ಲದೇ ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರ ಅಡಿಯಲ್ಲಿ ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು.