ದಕ್ಷಿಣ ಕನ್ನಡ:- ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಅಮ್ಮನವರ ಕೃಪಾಶೀರ್ವಾದದೊಂದಿಗೆ ದಿನಾಂಕ: 18.09.2020ನೇ ಶುಕ್ರವಾರ ಬೆಳಿಗ್ಗೆ 8.00 ಗಂಟೆಗೆ ಜನಜಾಗೃತಿ ಪ್ರಾದೇಶಿಕ ಕಛೇರಿಯ ಉದ್ಘಾಟನಾ ಕಾರ್ಯಕ್ರಮವು ಬೆಳ್ತಂಗಡಿ ಸಿಂಡಿಕೇಟ್ ಬ್ಯಾಂಕ್ ಬಳಿ ಇರುವ ಶ್ರೀ ಕ್ಷೇತ್ರ ಧರ್ಮಸ್ಥಳದ 'ಸುರೇಂದ್ರ ಮ್ಯಾನ್ಸನ್' ಕಟ್ಟಡದ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಲ್.ಹೆಚ್. ಮಂಜುನಾಥ್ ಹಾಗೂ ಮುಖ್ಯ ಅತಿಥಿಯಾಗಿ ವಿಧಾನಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಭಾಗವಹಿಸಲಿದ್ದಾರೆ. 
    ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ನವಜೀವನ ದಂಪತಿಗಳಾದ ವೇಣೂರು ಬಜಿರೆಯ ಶ್ರೀಧರ ಹೆಗ್ಡೆ ಇವರು ದೀಪ ಬೆಳಗಿಸಲಿರುವರು. ಜನಜಾಗೃತಿ ವೇದಿಕೆ ಧ್ವಜದ ಅನಾವರಣವನ್ನು  ಪ್ರತಾಪ್ ಸಿಂಹ ನಾಯಕ್ ಮಾಡಲಿದ್ದಾರೆ. ಹಾಗೂ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಡಾ| ಎಲ್.ಹೆಚ್. ಮಂಜುನಾಥ್ ರವರು ಕಾರ್ಯಕ್ರಮದ ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ.

   ಆದುದರಿಂದ ದಿನಾಂಕ:18.09.2020ರಂದು ಬೆಳಿಗ್ಗೆ 9.00 ಗಂಟೆಗೆ ತಾವೆಲ್ಲರೂ ಈ ಕಾರ್ಯಕ್ರದಲ್ಲಿ ಭಾಗವಹಿಸಬೇಕಾಗಿ ಆದರಪೂರ್ವಕ ವಿನಂತಿ. ತಮಗೆ ಬೆಳಿಗ್ಗೆ 8.45ಕ್ಕೆ ಉಪಹಾರದ ವ್ಯವಸ್ಥೆಯನ್ನು ಜನಜಾಗೃತಿ ವೇದಿಕೆಯ ಹಳೆ ಕಛೇರಿಯಲ್ಲಿ ವ್ಯವಸ್ಥೆಗೊಳಿಸಲಾಗಿದೆ ಎಂದು ಪ್ರಾದೇಶಿಕ ನಿರ್ದೇಶಕರಾಗಿರುವ ವಿವೇಕ್ ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.