ಮಂಗಳೂರು:- ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಶ್ರೀ ಪ್ರಾಪ್ತಿ ತೆಲಿಕೆದ ಕಲಾವಿದೆರ್ ಕುಡ್ಲ ,ತುಳುವ ಬೊಳ್ಳಿ ಪ್ರತಿಷ್ಠಾನ ಮತ್ತು ನಮ್ಮ ಟಿವಿ ಸಹಯೋಗದೊಂದಿಗೆ ‘’ನಾಟಕ ಪರ್ಬ’’ ಇದರ ಸಮಾರೋಪ ಸಮಾರಂಭದ ಉದ್ಘಾಟನೆಯು ತುಳುಭವನದ ಸಿರಿಚಾವಡಿಯಲ್ಲಿ ದಿನಾಂಕ 20.10.2020ರಂದು ನಡೆಯಿತು. ಹಿರಿಯ ನಾಟಕಕಾರ, ಸಾಹಿತಿ ,ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಶಿವಾನಂದ ಕರ್ಕೇರ ಅವರಿಗೆ ಸಂಸ್ಮರಣೆ ಕಾರ್ಯಕ್ರಮ ಈ ಸಂದರ್ಭದಲ್ಲಿ ನಡೆಯಿತು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ.ಕತ್ತಲ್‍ಸಾರ್ ಅವರು ಅಧ್ಯಕ್ಷತೆಯನ್ನು ವಹಿಸಿ, ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣವನ್ನು ಮಾಡಿದರು.  

ಮುಖ್ಯ ಅತಿಥಿಯಾಗಿ  ಆಗಮಿಸಿದ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಎ.ಸಿ.ಭಂಡಾರಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ‘’ತುಳು ನಾಟಕ ಪರ್ಬ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಜಿಲ್ಲೆಯ ಎಲ್ಲಾ ಸಮರ್ಥ ಕಲಾವಿದರನ್ನು ಒಗ್ಗೂಡಿಸಿ ಮಾಡುವಂತಹ ಕೆಲಸ ನಿಜವಾಗಿಯೂ ಪ್ರಶಂಸನೀಯ ಎಂದರು. ಹಾಗೆಯೇ ನಮ್ಮನ್ನು ಅಗಲಿದ ಶಿವಾನಂದ ಕರ್ಕೇರ ಅವರಿಗೆ ನುಡಿ ನಮನವನ್ನು ಸಲ್ಲಿಸಿದರು.    

ಅತಿಥಿಗಳಾಗಿ ಮುಂಬೈ ಉದ್ಯಮಿ ಚಿತ್ತರಂಜನ್ ಶೆಟ್ಟಿ ನುಡಿಯಾಲ್‍ಗುತ್ತು, ತುಳು ರಂಗನಟಿ  ಸರೋಜಿನಿ ಶೆಟ್ಟಿ,  ತುಳು ಸಿನಿಮಾ ನಟ ಚೇತನ್ ರೈ ಮಾಣಿ, ಗೆಜ್ಜೆಗಿರಿ ಕ್ಷೇತ್ರದ ಗೌರವ ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ, ಪಿ.ಡಬ್ಲ್ಯು ಕಾಂಟ್ರಾಕ್ಟರ್ ನಿತೇಶ್ ಪೂಜಾರಿ ಉಡುಪಿ,  ತುಳು ಸಿನಿಮಾರಂಗದ ನಿರ್ದೇಶಕರಾದ ರಂಜಿತ್ ಸುವರ್ಣ,  ತುಳುವ ಬೊಳ್ಳಿ ಪ್ರತಿಷ್ಠಾನದ ಅಧ್ಯಕ್ಷರಾದ ಯಾದವ ಕೋಟ್ಯಾನ್, ಸಿ.ಎಸ್.ಐ ಜೋಸ್ವಾ ಶಕ್ತಿನಗರದ  ಧರ್ಮಗುರು ರೆವರೆಂಡ್ ವಿನ್ಸೆಂಟ್,  ಪ್ರಕೃತಿ  ಫ್ರೂೀಟ್ಸ್ ಮಾಲಕ ಪ್ರಕಾಶ್ ಪ್ರಭು,  ಸಿನಿಮಾ ನಿರ್ದೇಶಕರಾದ ರಾಜ್ ಸುವರ್ಣ ಭಾಗವಹಿಸಿದ್ದರು.

ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ರಾಜೇಶ್ ಜಿ., ಅಕಾಡೆಮಿಯ ಸದಸ್ಯರಾದ ನಿಟ್ಟೆ ಶಶಿಧರ್ ಶೆಟ್ಟಿ, ನಾಗೇಶ್ ಕುಲಾಲ್, ಕಡಬ ದಿನೇಶ್ ರೈ , ಚೇತಕ್ ಪೂಜಾರಿ, ನರೇಂದ್ರ ಕೆರೆಕಾಡ್, ಸಂತೋಷ್ ಪೂಜಾರಿ, ರವಿ ಪಿ.ಎಂ ಮಡಿಕೇರಿ ಉಪಸ್ಥಿತರಿದ್ದರು.

ನಮ್ಮ ಟಿವಿ ನಿರೂಪಕರಾದ ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು. ಧೀರಜ್ ರೈ ಪ್ರಾರ್ಥಿಸಿದರು. ಏಳು ದಿನದ ನಾಟಕವನ್ನು ಪ್ರದರ್ಶಿಸಿದ ಕಲಾತಂಡವನ್ನು ಹಾಗೂ ನಾಟಕ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ಮಹನೀಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ರಂಗಭೂಮಿ, ಯಕ್ಷಗಾನ ಕಲಾವಿದ ಪ್ರಶಾಂತ್ ಸಿ.ಕೆ ಇವರನ್ನು ತನ್ನ ಕಲಾ ಸಾಧನೆಯ ಸೇವೆಗಾಗಿ ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಕಲಾ ಸವ್ಯಸಾಚಿ ಪ್ರಶಾಂತ್ ಸಿ.ಕೆ  ಅವರ ಸಾರಥ್ಯ ಮತ್ತು ನಿರ್ದೇಶನದಲ್ಲಿ  ತುಳುನಾಡಿನ  ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ 09 ಸಾಧಕರನ್ನು ಒಟ್ಟು ಸೇರಿಸಿ ‘’ಸತ್ಯೊದ ಬಿರುವೆರ್’’ ಎಂಬ ತುಳು ನಾಟಕ ಪ್ರದರ್ಶನ ನಡೆಯಿತು.ಈ ನಾಟಕದಲ್ಲಿ ಅಭಿನಯಿಸಿದ ಕಲಾವಿದರನ್ನು ಅಕಾಡೆಮಿ ವತಿಯಿಂದ ಗೌರವಿಸಲಾಯಿತು.