ಉಡುಪಿ( ಸೆಪ್ಟೆಂಬರ್, 4):  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಸ್ತುತ ಸಾಲಿನ ಪ.ಜಾತಿ ಮತ್ತು ಪoಗಡದ ಉಪಯೋಜನೆ ಅಡಿಯಲ್ಲಿ ಈಜು ಕಲಿತಿರುವ ಪ.ಜಾತಿ ಮತ್ತು ಪ.ವರ್ಗದ ಯುವಜನರಿಗೆ ಜೀವರಕ್ಷಕ(ಲೈಫ್‌ಗಾರ್ಡ್), ಜಿಮ್/ಫಿಟ್ನೆಸ್ ತರಬೇತುದಾರರು ಹಾಗೂ ಕ್ರೀಡಾ ಅಂಕಣ ಗುರುತುಗಾರರ(ಮಾರ್ಕರ್) ತರಬೇತಿಯನ್ನು ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.

ಅದರಂತೆ ಪ.ಜಾತಿ ಮತ್ತು ಪ.ಪಂಗಡದ ಯುವಕ-ಯುವತಿಯರಿಗೆ ಬೆಂಗಳೂರು, ಮೈಸೂರು, ಕಲಬುರ್ಗಿ, ಬಳ್ಳಾರಿ ಜಿಲ್ಲೆಗಳಲ್ಲಿ ತರಬೇತಿಯನ್ನು ಸಂಘಟಿಸಲಾಗಿದ್ದು, ಆಸಕ್ತರು ತಮ್ಮ ಪ್ರಸ್ತಾವನೆಗಳನ್ನು ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ  ಉಡುಪಿ ಕಛೇರಿಗೆ ಸೆಪ್ಟೆಂಬರ್ 30ರೊಳಗೆ ಸಲ್ಲಿಸಬಹುದಾಗಿದೆ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ದೂರವಾಣಿ ಸಂಖ್ಯೆ: 0820-2521324, 9480886467 ಇವರನ್ನು ಸಂಪರ್ಕಿಸುವ0ತೆ ಇಲಾಖೆಯ ಪ್ರಕಟಣೆ ತಿಳಿಸಿದೆ.