ಉಡುಪಿ,(ಸೆಪ್ಟೆಂಬರ್, 4):    ಕರ್ನಾಟಕ ಯಕ್ಷಗಾನ ಅಕಾಡೆಮಿಯ  ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಅಂಬಾತನಯ ಮುದ್ರಾಡಿ ಅವರನ್ನು ಆಯ್ಕೆ ಮಾಡಲಾಗಿದೆ. ‘ಗೌರವ ಪ್ರಶಸ್ತಿ’ಗೆ ಚಂದ್ರಶೇಖರ್ ದಾಮ್ಲೆ,  ಡಾ. ಆನಂದರಾಮ ಉಪಾಧ್ಯ, ಶ್ರೀ ರಾಮಕೃಷ್ಣ ಗುಂದಿ,  ಕೆ.ಸಿ.ನಾರಾಯಣ, ಚಂದ್ರು ಕಾಳೇನಹಳ್ಳಿ ಆಯ್ಕೆ ಮಾಡಲಾಗಿದ್ದು ಹಾಗೂ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ’ಗೆ  ನೆಲ್ಲೂರು ಜನಾರ್ದನ ಆಚಾರ್ಯ,   ಉಬರಡ್ಕ ಉಮೇಶ ಶೆಟ್ಟಿ, ನಿಡ್ಲೆ,  ಕುರಿಯ ಗಣಪತಿ ಶಾಸ್ತಿç,  ರ‍್ಗೋಡು ಮೋಹನದಾಸ್ ಶೆಣೈ,  ಮಹಮ್ಮದ್ ಗೌಸ್,   ರಾಮಚಂದ್ರ ಹೆಗಡೆ,  ಎಂ.ಎನ್.ಹೆಗಡೆ,  ಹಾರಾಡಿ ಸರ್ವೋತ್ತಮ ಗಾಣಿಗ,  ಮುಖವೀಣೆ ರಾಜಣ್ಣ,    ಎ.ಜಿ.ಅಶ್ವಥ ನಾರಾಯಣ  ಅವರನ್ನು  ಆಯ್ಕೆ ಮಾಡಲಾಗಿದ್ದು ‘ಪುಸ್ತಕ ಬಹುಮಾನ’ಕ್ಕೆ ಹೊಸ್ತೋಟ ಮಂಜುನಾಥ ಭಾಗವತ್,  ಕೃಷ್ಣಪ್ರಕಾಶ ಉಳಿತ್ತಾಯ, ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ಅವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.