ಉಡುಪಿ (ಜುಲೈ 24): ಕೋವಿಡ್ -19 ನಿಯಂತ್ರಣ ಬಗ್ಗೆ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಕೆಲವು ಅಧಿಕಾರಿಗಳನ್ನು ತಾತ್ಕಾಲಿಕ ವಾಗಿ ಕೋವಿಡ್ 19 ಪ್ರಕ್ರಿಯೆ ಮುಕ್ತಾಯಗೊಳ್ಳುವರೆಗೆ ವಿಶೇಷ ಕಾರ್ಯನಿರ್ವಾಹಕ ದಂಢಾಧಿಕಾರಿಯನ್ನು ತಾಲೂಕುಗಳಿಗೆ special Executive Magistrates ಯನ್ನಾಗಿ ನೇಮಕ ಮಾಡಲಾಗಿದೆ.
ರವಿ ಕುಮಾರ್ ಕ.ಆ.ಸೇ. ಸಹಾಯಕ ಕಮೀಷನರ್ ,ಭೂ ನ್ಯಾಯ ಮಂಡಳಿ ಕಾರ್ಕಳ ಮತ್ತು ಹೆಬ್ರಿ ತಾಲೂಕು, ಅರುಣ ಪ್ರಭಾ ಕ.ಆ.ಸೇ ಯೋಜನಾ ನಿರ್ದೇಶಕರು ,ನಗರಾಭಿವೃದ್ಧಿ ಕೋಶ ಉಡುಪಿ ಜಿಲ್ಲೆ, ಉಡುಪಿ ಮತ್ತು ಕಾಪು ತಾಲೂಕು, ರವೀಂದ್ರ ಉಪ ನಿರ್ದೇಶಕರು (ಪ್ರಭಾರ),ಭೂ ಮಾಪನ ಮತ್ತು ತಾಂತ್ರಿಕ ಸಹಾಯಕರು ಭೂ ದಾಖಲೆಗಳ ಇಲಾಖೆ ಉಡುಪಿ, ಬ್ರಹ್ಮಾವರ ತಾಲೂಕುಗಳಲಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ special Executive Magistrates ಅಧಿಕಾರಿಗಳಾಗಿ ನೇಮಕಗೊಂಡ ಅಧಿಕಾರಿಗಳು ತಮಗೆ ಸಂಬoಧಿಸಿದ ತಾಲೂಕುಗಳ Containment ವಲಯಗಳಲ್ಲಿ Incident Commander ಆಗಿ ಕರ್ತವ್ಯ ನಿರ್ವಹಿಸುವುದು.
ಕೋವಿಡ್ 19 positive ಪ್ರಕರಣಗಳ ಬಗ್ಗೆ ನಿಯಂತ್ರಿತ ವಲಯ Containment Zone ಗಳ ಅಧಿಸೂಚನೆ ಹೊರಡಿಸುವ ಬಗ್ಗೆ ಸಂಬAಧಪಟ್ಟ ತಹಶೀಲ್ದಾರರಿಂದ ಅಗತ್ಯ ಮಾಹಿತಿಗಳನ್ನು ಪಡೆದುಕೊಂಡು ನಿಯಂತ್ರಿತ ವಲಯ Containment Zone ಗಳ ಅಧಿಸೂಚನೆ ಹೊರಡಿಸುವವರೇ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಬೇಕಾಗಿ ಹಾಗೂ ಸದ್ರಿ ನಿಯಂತ್ರಿತ ವಲಯ Containment Zone ಗಳನ್ನು Denotification ಮಾಡುವ ಬಗ್ಗೆ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವುದು. ನಿಯಂತ್ರಿತ ವಲಯಗಳಿಗೆ ಸಂಬoಧಿಸಿದ ಇತರ ಎಲ್ಲಾ ಕೆಲಸ ಕಾರ್ಯಗಳನ್ನು ಚಾಚು ತಪ್ಪದೆ ನಿರ್ವಹಿಸಲು. ಕುಂದಾಪುರ /ಬೈಂದೂರು ತಾಲೂಕಿನ ಜವಾಬ್ದಾರಿಯನ್ನು ಸಹಾಯಕ ಕಮೀಷನರ್ ಕುಂದಾಪುರ ಉಪವಿಭಾಗ ಕುಂದಾಪುರ ಇವರು ನಿರ್ವಹಿಸಬೇಕೆಂದು ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜಿ.ಜಗದೀಶ್ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.