ಉಡುಪಿ (ಜುಲೈ 24): ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ ವತಿಯಿಂದ, ಸಂತೆಕಟ್ಟೆಯ ಸದಾನಂದ ನಾಯ್ಕರವರ ಮನೆಯ ವಠಾರದಲ್ಲಿ ದಿನಾಂಕ 24.07.2020 ರಂದು ನಡೆದ ಕಾಳು ಮೆಣಸಿನಲ್ಲಿ ಶೀಘ್ರ ಸೊರಗು ರೋಗದ ನಿರ್ವಹಣೆಯ ಮುಂಚೂಣಿ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಕೇಂದ್ರದ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರಾದ, ಡಾ. ಬಿ. ಧನಂಜಯರವರು ಮಾತಾನಾಡಿ ಕಾಳು ಮೆಣಸಿನಲ್ಲಿ ಬೆಳೆಯ ನಿರ್ವಹಣೆ, ಶೀಘ್ರ ಸೊರಗು ರೋಗದ ನಿರ್ವಹಣೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ನಂತರ ಕೀಟ ಶಾಸ್ತೃಜ್ಞರಾದ, ಡಾ. ಸಚಿನ್.ಯು.ಎಸ್ ರವರು ಮಾತನಾಡಿ, ಶೀಘ್ರ ಸೊರಗು ರೋಗದ ಲಕ್ಷಣ ಹಾಗೂ ಅದರ ಸಮಗ್ರ ನಿರ್ವಹಣೆಯಲ್ಲಿ ಟ್ರೈಕೋಡರ್ಮಾ, ಸೂಕ್ಷ್ಮಾಣು ಜೀವಿಗಳ ಸಮ್ಮಿಶ್ರಣ, ಪೊಟ್ಯಾಶಿಯಂ ಫಾಸ್ಪೋನೇಟ್ ಬೇವಿನ ಹಿಂಡಿಯ ಬಳಕೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ, ಕೇಂದ್ರದ ವತಿಯಿಂದ ಆಯ್ದ ರೈತರಿಗೆ ಶೀಘ್ರ ಸೊರಗು ರೋಗದ ನಿರ್ವಹಣೆಯ ನಿರ್ಣಾಯಕ ಪರಿಕರಗಳನ್ನು ವಿತರಿಸಿ,ಟ್ರೈಕೋಡರ್ಮಾದ ಬಳಕೆಯ ಪದ್ದತಿ ಪ್ರಾತ್ಯಕ್ಷಿಕೆಯನ್ನು ರೈತರಿಂದಲೇ ಮಾಡಿಸಲಾಯಿತು.
ಇದೇ ಸಂದರ್ಭದಲ್ಲಿ ರೈತರ ಬೇಡಿಕೆಯ ಮೇರೆಗೆ ಕೊಕ್ಕೊ ಮತ್ತು ಗೇರು ಬೆಳೆಯಲ್ಲಿ ಚೌಟಣಿ ((Pಡಿuಟಿiಟಿg)) ಮಾಡುವ ಕ್ರಮವನ್ನು ಪದ್ದತಿ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ತೋರಿಸಲಾಯಿತು. ನಂತರ ಸದಾನಂದ ನಾಯ್ಕರವರು ಸಮಗ್ರ ಕೃಷಿ ಪದ್ದತಿಯಲ್ಲಿ ಕಾಡುಪ್ರಾಣಿಗಳ ತಡೆಗೆ ಅಳವಡಿಸಿಕೊಂಡ ಕಂದಕಗಳ ಮಾದರಿ, ಹೈನುಗಾರಿಕೆ, ಬಯೋಡೈಜೆಸ್ಟರ್, ಸ್ಲರಿ ಘಟಕ, ಗೋಬರ್ ಗ್ಯಾಸ್ ಘಟಕ ಹಾಗೂ ವಿವಿಧ ಬೆಳೆಗಳ ತಾಕುಗಳಿಗೆ ಭೇಟಿ ನೀಡಿ ರೈತರು ಹರ್ಷ ವ್ಯಕ್ತಪಡಿಸಿದರು.