ಉಡುಪಿ: ಉಡುಪಿ ಜಿಲ್ಲಾ ಪಂಚಾಯತ್ ನಿಂದ , ಜಿಲ್ಲೆಯ ಎಲ್ಲಾ ಎಲ್ಲಾ 158 ಗ್ರಾಮ ಪಂಚಾಯತ್ಗಳಿಗೆ ಕೋವಿಡ್-19 ಕಿಟ್ಗಳ ವಿತರಣೆ ಕಾರ್ಯಕ್ರಮದ ಅಂಗವಾಗಿ , ಅಲೆವೂರು ಮತ್ತು ಬಡಗಬೆಟ್ಟು ಗ್ರಾಮ ಪಂಚಾಯತ್ ಗಳಿಗೆ ಅಧ್ಯಕ್ಷ ದಿನಕರ ಬಾಬು ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಾಂಕೇತಿಕವಾಗಿ ಕಿಟ್ಗಳನ್ನು ವಿತರಿಸಿದರು.
ಈ ಕಿಟ್ ನಲ್ಲಿ ಪ್ರತಿ ಪಂಚಾಯತ್ ಗಳಿಗೆ 60 ಮಾಸ್ಕ್ (ಇವುಗಳನ್ನು ಜಿಲ್ಲೆಯ ಸ್ವಸಹಾಯ ಸಂಘದ ಸದಸ್ಯರು ತಯಾರಿಸಿದ್ದಾರೆ) ಫೇಸ್ ಶೀಲ್ಡ್ ಗಳು 3 ( ಬ್ರಹ್ಮ ಕುಮಾರಿ ಸಮಾಜದಿಂದ ಕಡಿಮೆ ವೆಚ್ಚದಲ್ಲಿ ತಯಾರಿಕೆ) , 4 ಗಾಗಲ್ ಗಳು , 3 ಬಟ್ಟೆಯ ಏಪ್ರಾನ್ ಮತ್ತು ಮಳೆಗಾಲದಲ್ಲಿ ಧರಿಸಬಹುದಾದ 3 ಏಪ್ರಾನ್ ಗಳು ಮತ್ತು ಅಬಕಾರಿ ಇಲಾಖೆಯಿಂದ ತಯಾರಿಸಿದ 4 ಸ್ಯಾನಿಟೈಸೆರ್ ಬಾಟೆಲ್ ಗಳು , ರಬ್ಬರ್ ಗ್ಲೌಸ್ ಗಳು 10 ಜೊತೆ , ಇದಲ್ಲದೇ 2 ಜೊತೆ ಗಮ್ ಬೂಟ್ ಖರೀದಿ ಮತ್ತು ಸೋಪ್ ಮತ್ತು ಬ್ಲೀಚಿಂಗ್ ಪೌಡರ್ ಖರೀದಿಗೆ ಅನುದಾನ ನೀಡಲಾಗುತ್ತಿದ್ದು, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರು, ಸ್ವಚ್ಚತಾ ಕೆಲಸಗಾರರು ಮತ್ತು ಎಲ್.ಎಲ್.ಆರ್.ಎಂ ಸಿಬ್ಬಂದಿಗಳಿಗೆ ವಿತರಿಸಲಾಗುವುದು. ಜಿಲ್ಲಾ ಸ್ವಚ್ಛ ಭಾರತ್ ಮಿಷನ್ ವತಿಯಿಂದ ಸುರಕ್ಷಾ ಕಿಟ್ ಗಳ್ನು ಸರಬರಾಜು ಮಾಡಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಸ್ವಚ್ಛ ಭಾರತ್ ಮಿಷನ್ ವತಿಯಿಂದ ಹೊರತಂದ ಫ್ಲಿಪ್ ಚಾರ್ಟ್ ಮತ್ತು ಕ್ಯಾಲೆಂಡರ್ ಗಳನ್ನು ಅಧ್ಯಕ್ಷ ದಿನಕರ ಬಾಬು ಬಿಡುಗಡೆಗೊಳಿಸಿದರು.
ಉಪಾಧ್ಯಕ್ಷೆ ಶಿಲ್ಪಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೋಭಾ ಜಿ ಪುತ್ರನ್, ಪ್ರತಾಪ್ ಹೆಗ್ಡೆ ಮಾರಾಳಿ,ಸುಮಿತ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹಲೋತ್, ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.