ಉಡುಪಿ (ಸೆಪ್ಟೆಂಬರ್, 21): ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿರುವ ಅನುಪಯುಕ್ತ ಸರ್ಕಾರಿ ವಾಹನಗಳಾದ ಟಾಟಾ ಸುಮೋ ವಿಕ್ಟಾ, ಮಹೇಂದ್ರ ಮಾರ್ಷಲ್ ಜೀಪ್ ಮತ್ತು ಅಂಬಾಸಿಡರ್ ಕಾರನ್ನು ಅಕ್ಟೋಬರ್ 1 ರಂದು ಬೆಳಗ್ಗೆ 11 ಗಂಟೆಗೆ ಉಡುಪಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ಕಚೇರಿಯಲ್ಲಿ ಬಹಿರಂಗ ಹರಾಜು ಮಾಡಲಾಗುವುದು.
ಆಸಕ್ತರು ಹರಾಜಿನಲ್ಲಿ ಭಾಗವಹಿಸುವಂತೆ ಅಬಕಾರಿ ಉಪ ಆಯುಕ್ತರ ಪ್ರಕಟಣೆ ತಿಳಿಸಿದೆ.