ನಾಲ್ಕು ಗೋಡೆಗಳ ಶಿಕ್ಷಣಕ್ಕಿಂತ ತೀರಾ ಭಿನ್ನವಾದ ಯೋಚನೆ ಇದು.

ರಾಷ್ಟ್ರಮಟ್ಟ ದಲ್ಲಿ ಸಾಧನೆ ಮಾಡಿದ ಮಹನೀಯರನ್ನು ಕರೆದು,ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪರಿಚಯ ಮಾಡೋದು ಹಾಗೂ ಅವರೊಂದಿಗೆ ಮುಖಾಮುಖಿಯಾಗಿಸುವ,ಆ ಮೂಲಕ ಸಾಧಕರ ಹಿಂದಿನ ಪರಿಶ್ರಮ,ನಡೆದು ಬಂದ ದಾರಿ ಇತ್ಯಾದಿ ತಿಳಿದುಕೊಳ್ಳುವ ಒಂದು ಆಪ್ತ ಕಾರ್ಯಕ್ರಮ.

ಮೊದಲ ಸಾಧನಾ ಶೃಂಗಕ್ಕೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಆರ್.ಗಂಗಾಧರ್ ಬಂದಿದ್ದರಂತೆ.ಮೂರನೇ ಸಾಧಕರಾಗಿ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಬರ್ತಾರಂತೆ.ಇವರ ಮಧ್ಯೆ ಎರಡನೇ ಸಾಧನಾ ಶೃಂಗದ ಅತಿಥಿಯಾಗುವ ಭಾಗ್ಯ ಈ ರಂಗನಿರ್ದೇಶಕನಿಗೆ.!
ಅಚ್ಚುಕಟ್ಟುತನ-ಸರಳತೆಯಲ್ಲೂ ಬಹಳ ಗೌರವದ ಕಾರ್ಯಕ್ರಮ ಇದು.ವೀಕೆಂಡ್ ರಮೇಶ್ ರ ಹಾಟ್ ಸೀಟ್ ಇದ್ದಂತೆ ರಂಗದಲ್ಲಿ ಒಂದೇ ಒಂದು ಆಸನ..ಬಂದ ಅತಿಥಿಯೇ ಇವರಿಗೆ ಹೀರೋ.!
ಮಾತಿಗೆ ಕಿವಿಯಾಗಲು ಮಕ್ಕಳು ಮಾತ್ರ ಅಲ್ಲ,ಶಿಕ್ಷಕರೂ ಎದುರು ಕೂತರು ಮುಗ್ಧರಂತೆ!
ಬ್ಯಾಂಡ್ ಸೆಟ್ ಮೆರವಣಿಗೆಯಲ್ಲಿ ನನ್ನನ್ನು ಕರೆದೊಯ್ದದ್ದು,ನನ್ನ ಪರಿಚಯ ಮಾಡಿದ ಪರಿ,ನನ್ನ ಮಾತುಗಳನ್ನು ಎಲ್ಲರೂ ಆಲಿಸಿದ ರೀತಿ,ಮಕ್ಕಳ ಕುತೂಹಲಕಾರಿ ಪ್ರಶ್ನೆಗಳು,ಸನ್ಮಾನದ ಗೌರವ,ಬಳಿಕ ಶಿಕ್ಷಕರೊಂದಿಗೆ ಇಡೀ ಶಾಲೆಯ ವಿದ್ಯಾರ್ಥಿಗಳು ನನ್ನೊಂದಿಗೆ ಫೋಟೋ ತೆಗೆಸಿಕೊಂಡದ್ದು, ಎಲ್ಲವೂ ನನಗೆ ಹೊಸ ಅನುಭವ.! ಸ್ಮರಣೀಯ !